ಬೆಳ್ಳಾರೆಯಲ್ಲಿ 20ನೇ ವರ್ಷದ ಮೊಸರು ಕುಡಿಕೆ ಉತ್ಸವ

Advt_Headding_Middle
Advt_Headding_Middle

ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 2೦ ನೇ ವರ್ಷದ ಮೊಸರು ಕುಡಿಕೆ ಉತ್ಸವ ಬೆಳ್ಳಾರೆ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಹಿರಿಯ ಕಲಾವಿದ ಐತ್ತ ಪಾಟಾಜೆ ಮೊಸರು ಕುಡಿಕೆ ಉತ್ಸವವನ್ನು ಉದ್ಘಾಟಿಸಿದರು.

ಸ್ನೇಹಿತರ ಕಲಾಸಂಘದ ಆಧ್ಯಕ್ಷ ಆನಂದ ಗೌಡ ಪಡ್ಪು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಬೆಳ್ಳಾರೆ ಜೇಸಿಐನ ಪೂವಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ, ಅಚಲಾಪುರ ಕಟ್ಟೆ ಸಮಿತಿ ಅಧ್ಯಕ್ಷ ಮಿಥುನ್ ಶೆಣೈ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ನಾಯಕ್ ,ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಯರಾಮ ಉಮಿಕ್ಕಳ, ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಎ.ಕೆ.ಮಣಿಯಾಣಿ, ಉದ್ಯಮಿ ಅಜಯ್ ಸಾರಕೆರೆ, ವಿರಾಟ್ ಫ್ರಂಡ್ಸ್ ಅಧ್ಯಕ್ಷ ಗಂಗಾಧರ ಪಾಟಾಳಿ ಉಪಸ್ಥಿತರಿದ್ದರು

 ಶಶಿಧರ ಮಣಿಯಾಣಿ ಸ್ವಾಗತಸಿ.ಕಾರ‍್ಯದರ್ಶಿ ಸಂಜಯ್ ನೆಟ್ಟಾರ್ ವಂದಿಸಿದರು,ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಕಾರ‍್ಯಕ್ರಮ ನಿರ್ವಹಿಸಿದರು .


ಅಪರಾಹ್ನ ನಡೆದ ಸಭೆ ಮತ್ತು ಸನ್ಮಾನ ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕ ಕೆ. ಪುರಂದರ ನಾರಾಯಣ ಭಟ್‌ರವರಿಗೆ ಗುರುರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ನಿವೃತ್ತ ಯೋಧ ಮೋಹನ್‌ದಾಸ್ ಕುಳ್ಳಂಪಾಡಿ, ಹಿರಿಯರ ವಿಭಾಗದ ರಾಷ್ಟ್ರೀಯ ಕ್ರೀಡಾಪಟು ಸುನಂದಾ ರೈ ಅಜಪಿಲ, ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಶಿಕ್ಷಕಿ ಸುಲೋಚನಾ ಪಡ್ಪು ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸ್ನೇಹಿತರ ಕಲಾಸಂಘದ ಆಧ್ಯಕ್ಷ ಆನಂದ ಗೌಡ ಪಡ್ಪು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಕುಂತಳಾ ನಾಗರಾಜ್, ಅಜಪಿಲ ಮಾಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಮೆಸ್ಕಾಂನ ಜ್ಯೂನಿಯರ್ ಇಂಜಿನಿಯರ್ ಪ್ರಸಾದ್ ಕತ್ಲಡ್ಕ, ಜಲದುರ್ಗಾದೇವಿ ಅರ್ಥ್‌ಮೂವರ‍್ಸ್ ಮಾಲಕ ಪದ್ಮನಾಭ ಬೀಡು, ಸ್ನೇಹಶ್ರೀ ಮಹಿಳಾ ಮಂಡಲದ ಅಧ್ಯಕೆ ಪುಷ್ಪಾ ಆದಿತ್ಯ ಪಾಟಾಜೆ, ಅಜಪಿಲ ವಿಷ್ಣುಮೂರ್ತಿ ಸೇವಾಸಮಿತಿ ಅಧ್ಯಕ್ಷ ಅಮೃತ್ ಕುಮಾರ್ ಕಿಲಂಗೋಡಿ ಉಪಸ್ಥಿತರಿದ್ದರು. ಚಂದ್ರಶೇಖರ ಪನ್ನೆ ಸ್ವಾಗತಿಸಿ ,ಸಂಜಯ್ ನೆಟ್ಟಾರ್ ವಂದಿಸಿದರು. ಶಿಕ್ಷಕ ಅಚ್ಚುತ ಅಟ್ಲೂರು ಕಾರ‍್ಯಕ್ರಮ ನಿರ್ವಹಿಸಿದರು.ಮಹಿಳೆಯರ ವಿಭಾಗ ,ಪುರುಷರ ವಿಭಾಗ ,ಬಾಲಕರ ವಿಭಾಗ ,ಬಾಲಕಿಯರ ವಿಭಾಗದಲ್ಲಿ ವಿವಿಧ ಸ್ಪರ್ಧಾ ಕಾರ‍್ಯಕ್ರಮಗಳು ನಡೆಯಿತು. ಮೂರು ವಿಭಾಗಗಳಲ್ಲಿ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ ನಡೆಯಿತು.

ಅತಿವೃಷ್ಠಿ: ನಡೆಯದ ಪಿರಮಿಡ್ ಮೊಸರು ಕುಡಿಕೆ
ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ೩ ನೇ ವರುಷದ ಪಿರಮಿಡ್ ಮೊಸರು ಕುಡಿಕೆ ಅತಿವೃಷ್ಠಿಯಿಂದಾದ ದುಷ್ಪರಿಣಾಮದಿಂದ ಕಂಗಾಲಾದ ದೇಶಬಂಧುಗಳ ನೋವಿಗೆ ಸ್ಪಂದಿಸುವ ದೃಷ್ಠಿಯಲ್ಲಿ ನಡೆಯಲಿಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.