ನಗರ ಪಂಚಾಯತ್ ವಿರುದ್ಧ ಧಿಕ್ಕಾರ ಕೂಗಬೇಕಿದೆ : ಎಂ. ವೆಂಕಪ್ಪ ಗೌಡ

Advt_Headding_Middle
Advt_Headding_Middle

ಸುಳ್ಯದ ಪ್ರತಿಯೊಬ್ಬರಿಗೂ ಕುರುಂಜಿಯವರ ಮೇಲಿನ ಋಣ ಇದೆ. ಈ ಪ್ರತಿಭಟನೆಗೆ ಸಾಕ್ಷಿಯಾಗುವ ಮೂಲಕ ಎಲ್ಲರೂ ಈ ಋಣ ಸಂದಾಯ ಮಾಡಬೇಕಿತ್ತು ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಹೇಳಿದರು.

ಸುಳ್ಯದಲ್ಲಿ ಕೆವಿಜಿ ಕ್ಯಾಂಪಸ್ ಪರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಸುಳ್ಯ ನಗರ ಪಂಚಾಯತ್‌ನಲ್ಲಿ ೧೯ ಜನ ಸದಸ್ಯರಿದ್ದಾರೆ. ಒಬ್ಬ ಸದಸ್ಯನ ವಿರುದ್ಧ ಪ್ರತಿಭಟನೆಯನ್ನು ಘೋಷಣೆ ಮಾಡಲಾಗಿದೆ. 

ಒಬ್ಬ ಸದಸ್ಯ ಬಾರದಿದ್ದರೆ ಕ್ಷಮೆ ಇತ್ತು. ಆದರೆ ಯಾವ ಸದಸ್ಯರೂ ಬಾರದಿದ್ದುದರಿಂದ ಇಡೀ ನಗರ ಪಂಚಾಯತ್‌ಗೂ ಧಿಕ್ಕಾರ ಕೂಗಬೇಕಾಗುತ್ತದೆ.
 ಅವಮಾನ ಮತ್ತು ಅಪಪ್ರಚಾರದಲ್ಲಿ ನಿಮಗೂ ಪಾಲಿದೆಯಾ ಎಂದು ಪ್ರಶ್ನೆ ಮಾಡಬೇಕಾಗುತ್ತದೆ. ಎಂದು ವೆಂಕಪ್ಪ ಗೌಡರು ಪ್ರಶ್ನಿಸಿದರು.
೨೦೦೯-೧೦ರಲ್ಲಿಯೇ ಈ ತೆರಿಗೆ ವಿವಾದ ಇತ್ತು. ಆಗ ನಾನು, ಎನ್.ಎ.ರಾಮಚಂದ್ರ, ಮುಸ್ತಫಾ, ಪ್ರಕಾಶ್ ಹೆಗ್ಡೆ, ದಿನೇಶ್ ಅಂಬೆಕಲ್ಲು ಮೊದಲಾದವರು ಸೇರಿ ಈ ವಿವಾದಕ್ಕೆ ತಾರ್ಕಿಕ ಅಂತ್ಯ ನೀಡಿದ್ದೇವೆ. ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್ ಸೇರಿದಂತೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಾತುಕತೆ ನಡೆದು ಸೇವಾ ತೆರಿಗೆ ಎಂದು ೮ ಲಕ್ಷ ನಿರ್ಧರಿಸಿದ್ದೆವು. ೩ ವರ್ಷಕ್ಕೊಮ್ಮೆ ಇದರ ಶೇ. ೨೫ ಜಾಸ್ತಿಯಾಗಿ ಅದರಂತೆ ೨೩,೧೦,೪೫೩ ಅವರು ಪಾವತಿಸಿದ್ದಾರೆ. ಇಷ್ಟಿದ್ದರೂ ಅವರ ವಿರುದ್ಧ ಮಾತನಾಡಲು ನಾಲಗೆ ಬಂತಲ್ವಾ ಎಂದು ಅವರು ಪ್ರಶ್ನಿಸಿದರು. ನ.ಪಂ.ನ ಹಿರಿಯ ಸದಸ್ಯರು ಇಂತಹ ಅಪಪ್ರಚಾರ ಸರಿಯಲ್ಲ ಎಂದು ತಿಳಿಹೇಳಬೇಕಿತ್ತು.

ಅದನ್ನು ಮಾಡದೆ ನಿಮ್ಮ ಪರವಾಗಿ ಪ್ರತಿಭಟನೆ ಕ್ಯಾನ್ಸಲ್ ಮಾಡಿಸುತ್ತೇವೆ ಎಂದು ಹೇಳಿದ್ದಾರೆ. ಅವರ ಬುದ್ಧಿವಂತಿಕೆ ಜಾಸ್ತಿಯಾಯಿತೇನೋ? ಎಂದು ವೆಂಕಪ್ಪ ಗೌಡರು ಪ್ರಶ್ನಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.