ಬೊಳುಬೈಲು : ನವಚೇತನ ಯುವಕ ಮಂಡಲದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ

Advt_Headding_Middle
Advt_Headding_Middle

ನವಚೇತನ ಯುವಕ ಮಂಡಲ (ರಿ.) ಬೊಳುಬೈಲು ಇದರ ಆಶ್ರಯದಲ್ಲಿ 24ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ರಾಧಾಕೃಷ್ಣ ಗೌಡ ನೆಕ್ರಾಜೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸಂಸ್ಥೆಯ ಗೌರವಾಧ್ಯಕ್ಷ ಜನಾರ್ಧನ ಬೊಳುಬೈಲು ಸಭಾಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷರಾದ ಭುವನೇಂದ್ರ ಬೊಳುಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಚಿನ್ ರೈ ಕುಕ್ಕಂದೂರು ಸ್ವಾಗತಿಸಿ, ನಿತಿನ್ ಬೊಳುಬೈಲು ವಂದಿಸಿದರು. ಪ್ರವೀಣ್ ಕಾಟೂರು ನಿರೂಪಿಸಿದರು.

ನಂತರ ಪುರುಷರಿಗೆ, ಮಹಿಳೆಯರಿಗೆ, ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಐದು ವರ್ಷದ ಕೆಳಗಿನ ಮಕ್ಕಳಿಗೆ ನಡೆದ ಶ್ರೀ ಕೃಷ್ಣ ವೇಷ ಸ್ಪರ್ಧೆಯು ಆಕರ್ಷಕವಾಗಿತ್ತು. ಸ್ಪರ್ಧಾ ಕಾರ್ಯಕ್ರಮಗಳ ವೀಕ್ಷಕ ವಿವರಣೆಯನ್ನು ಪ್ರಸಾದ್ ಕಾಟೂರು ನಡೆಸಿಕೊಟ್ಟರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಹಕಾರ ಭಾರತಿಯ ಜಿಲ್ಲಾಧ್ಯಕ್ಷರು ಹಾಗೂ ಕ್ಯಾಂಪ್ಕೊ ಲಿಮಿಟೆಡ್ ಇದರ ನಿರ್ದೇಶಕರಾದ ಕೃಷ್ಣ ಪ್ರಸಾದ್ ಮಡ್ತಿಲ ಅಧ್ಯಕ್ಷತೆ ವಹಿಸಿದ್ದರು. ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ಪ್ರಧಾನ ಕಾರ್ಯದರ್ಶಿ ಬ. ಗಣರಾಜ ಭಟ್ ಕೆದಿಲ ಧಾರ್ಮಿಕ ಪ್ರಧಾನ ಉಪನ್ಯಾಸ ನೀಡಿದ್ದರು.

ಮುಖ್ಯ ಅತಿಥಿಗಳಾಗಿ ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಮಂಜುನಾಥ ಐತಾಳ್ ಮತ್ತು ನಿವೃತ್ತ ಯೋಧ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಇದರ ಜಿಲ್ಲಾ ಉಪಾಧ್ಯಕ್ಷರಾಗಿರುವ ಪುರುಷೋತ್ತಮ ನಂಗಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಯುವಸಿರಿ ಪುರಸ್ಕಾರವನ್ನು ಜನಾರ್ಧನ ಬೊಳುಬೈಲು ಹಾಗೂ ಪ್ರತಿಭಾ ಪುರಸ್ಕಾರವನ್ನು ಮಾ| ಕೌಶಿಕ್ ನೆಕ್ರಾಜೆ ಇವರಿಗೆ ನೀಡಿ ಸನ್ಮಾನಿಸಲಾಯಿತು.

ಚಂದ್ರಶೇಖರ ನೆಕ್ರಾಜೆ ಸ್ವಾಗತಿಸಿ, ಜಯಪ್ರಕಾಶ್ ಬೈತಡ್ಕ ವಂದಿಸಿದರು. ಕಾರ್ಯದರ್ಶಿ ಪ್ರಸಾದ್ ಕಾಟೂರು ವರದಿ, ಪದ್ಮನಾಭ ನೆಕ್ರಾಜೆ ಬಹುಮಾನ ಪಟ್ಟಿ ವಾಚಿದರು. ಸುಧೀರ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು. ನಂತರ ಸಂಭ್ರಮ ಕಲಾವಿದೆರ್ ಸುಳ್ಯ ಇವರಿಂದ ಹಾಸ್ಯಮಯ, ಸಾಮಾಜಿಕ, ತುಳು ನಾಟಕ ಮಂಡೆಹಾಕೊಡ್ಚಿ ಪ್ರದರ್ಶನಗೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.