Breaking News

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಜಯವರ್ಧನ ಎಂ.ಎಲ್. ರವರಿಗೆ ಡಾಕ್ಟರೇಟ್

Advt_Headding_Middle
Advt_Headding_Middle

ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಜಯವರ್ಧನ ಎಂ.ಎಲ್. ಅವರು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಎನ್.ಐ.ಟಿ.ಕೆ., ಸುರತ್ಕಲ್‌ನಿಂದ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಇವರು ಡಾ. ಮೃತ್ಯುಂಜಯ ದೊಡ್ಡಮನಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್, ಎನ್.ಐ.ಟಿ.ಕೆ. ಸುರತ್ಕಲ್ ಇವರ ಮಾರ್ಗದರ್ಶನದಲ್ಲಿ “Experimental Investigation of Glass Microballoon/HDPE Syntactic Foam Composite” ಎನ್ನುವ ವಿಷಯದಲ್ಲಿ ಸಂಶೋಧನೆ ನಡೆಸಿ ಸಿದ್ಧಪಡಿಸಿದ ಪ್ರಬಂಧಕ್ಕೆ ಈ ಗೌರವ ದೊರೆತಿದೆ. ಇವರು ಈ ಸಂಶೋಧನಾ ವಿಷಯದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧವನ್ನು ಮಂಡಿಸಿರುತ್ತಾರೆ. ಇವರು ಸುಳ್ಯ ಕೇರ್ಪಳದ ಮಕ್ಕಟ್ಟಿಕಾರ‍್ಸ್ ನಿಲಯ ಲಿಂಗಪ್ಪ ಗೌಡ ಮತ್ತು ಮತ್ತು ಶ್ರೀಮತಿ ಮದನಾವತಿ ಕೆ.ಎಲ್. ದಂಪತಿಗಳ ಸುಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.