ಎಲ್ಲಾ ಚಿಂತನೆಗಳು ಮಾನವೀಯ ಅಡಿಗಟ್ಟಿನಲ್ಲಿ ನಿಂತಾಗ ಬದುಕು ಸಾರ್ಥಕ- ರಾಜೇಶ್ ಬೆಜ್ಜಂಗಳ

Advt_Headding_Middle
Advt_Headding_Middle

ನಾವು ಪಾಟದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮಾನವೀಯ ಸಂಬಂದಗಳನ್ನು ವೃದ್ಧಿಸಿಕೊಳ್ಳಬೇಕು. ಗೌರವ ಕೊಟ್ಟು ನಾವು ಗೌರವ ಪಡೆದುಕೊಳ್ಳುವ ಸಂಪ್ರದಾಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಂದರವಾದ ಬದುಕನ್ನು ಕಟ್ಟಬೇಕು. ನಮ್ಮೆಲ್ಲಾ ಸಂಬಂಧಗಳು, ಎಲ್ಲಾ ಚಿಂತನೆಗಳು ಮಾನವೀಯ ಅಡಿಗಟ್ಟಿನಲ್ಲಿ ನಿಂತಾಗ ಬದುಕು ಸಾರ್ಥಕ ವಾಗುತ್ತದೆ. ಆರೀತಿಯ ಬದುಕು ನಮ್ಮದಾಗಬೇಕು ಎಂದು ಕಣ್ಣೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿರ್ದೆಶಕರಾದ ಡಾ. ರಾಜೇಶ ಬೆಜ್ಜಂಗಳ ಹೇಳಿದರು.

ಅವರು ಆ-31ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿನ ೨೦೧೮-೧೯ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ದಿನಾಚರಣೆ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಆಧುನಿಕ ತಂತ್ರಜ್ಞಾನವನ್ನು ಕ್ರಿಯಾತ್ಮಕವಾಗಿ ಬಳಸಿ ಉಪಯೋಗಿಬೇಕೇ ವಿನಹ ದುರುಪಯೋಗ ಪಡಿಸಿಕೊಳ್ಳಬಾರದು. ಈ ಮೂಲಕ ನಮ್ಮತನವನ್ನು ನಾವು ಪ್ರದರ್ಶಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ ಅಚ್ಯುತ ಪೂಜಾರಿ ವಹಿಸಿದ್ದರು. ೨೦೧೮-೧೯ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಅಂಗಾರ ನೆರವೇರಿಸಿದರು.

ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತೀಶ್ ಕುಮಾರ್ ಕೆ ಆರ್ ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕ ಶಿವಾನಂದ್ ವಂದಿಸಿದರು. ಇಂಗ್ಲೀಷ್ ಉಪನ್ಯಾಸಕಿ ಸುರೇಖಾ ಹಾಗೂ ವಾಣಿಜ್ಯಶಾಸ್ತ್ರ ಉಪನ್ಯಾಸಕ ರಂಜಿತ್ ಕಾರ‍್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಸಾಂಸ್ಕೃತಿಕ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಶ್ವಿಜಾ ಕೆ.ಎಸ್, ವಿಜೇತ್ ಸುವರ್ಣ, ಗಿರೀಶ್ ಕುಮಾರ್, ಪ್ರವೀಣ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.