“ಉದಾರ ಮನದ ರಕ್ತದಾನಿಯೇ ನಿಜವಾದ ಆಪತ್ಬಾಂಧವ”

Advt_Headding_Middle
Advt_Headding_Middle

ಬೆಳ್ಳಾರೆ:”ರಕ್ತದಾನ ಮಾಡುವವನಿಗೆ ಇಂದು ಪ್ರಥಮ ಆದ್ಯತೆ ನೀಡಿ ಗೌರವಿಸಬೇಕು.ರಕ್ತದಾನವನ್ನು ಉದಾರ ಮನಸ್ಸಿನಿಂದ ಅಗತ್ಯ ಸಮಯದಲ್ಲಿ ದಾನ ಮಾಡಿದವನೇ ನಿಜವಾದ ಆಪತ್ಬಾಂಧವನಾಗುತ್ತಾನೆ”ಎಂದು ದಯಾನಂದ ಕೋಟೆ ಹೇಳಿದರು.ದಿ.ಕೋಟೆ ವಸಂತಕುಮಾರರವರ ಸ್ಮರಣಾರ್ಥವಾಗಿ ಕಳಂಜ,ಬಾಳಿಲ ಕೃ.ಪ.ಸಹಕಾರಿ ಸಂಘದ ಹಾಗು ರೋಟರಿ ಬ್ಲಡ್‌ಬ್ಯಾಂಕ್ ಪುತ್ತೂರಿನ ಜಂಟಿಯಾಗಿ ಆಯೋಜಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು”ಕೋಟೆ ವಸಂತಕುಮಾರರು ಎಲ್ಲರ ಹೃದಯದೊಳಗೆ ವಿರಾಜಮಾನರಾದ ವ್ಯಕ್ತಿಯಾಗಿದ್ದರು.ಅಂತಹ ಜನಮೆಚ್ಚಿದ ವ್ಯಕ್ತಿಯ ಸ್ಮರಣಾರ್ಥವಾಗಿ ಪ್ರತಿವರ್ಷವು ಇದೇ ದಿನದಂದು ರಕ್ತದಾನ ಶಿಬಿರವನ್ನು ಆಯೋಜಿಸುತ್ತಿರುವುದರಿಂದ ಅವರ ಆತ್ಮ ಸಂತಸಗೊಳ್ಳಬಹುದು”ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಳಂಜ,ಬಾಳಿಲ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ರೈಯವರು ಮಾತನಾಡಿ “ವಸಂತಕುಮಾರರ ಜೀವನವೇ ಇತತರಿಗೆ ಒಂದು ಸಂದೇಶ. ಆಡು ಮುಟ್ಟದ ಸೊಪ್ಪಿಲ್ಲ,ಕೋಟೆಯವರು ಮಾಡದೆ ಉಳಿದಿರುವ ಜನಮೆಚ್ಚಿದ ಕಾರ್ಯಗಳೇ ಇಲ್ಲ” ಎಂದು ಹೇಳಿದರು.

ಸಮಾರಂಭದಲ್ಲಿ ದಾನಿಗಳಿಗೆ ರಕ್ತದಾನದ ಮಹತ್ವ ಹಾಗು ಪ್ರಯೋಜನಗಳ ಕುರಿತು ವೈದ್ಯಾಧಿಕಾರಿಗಳಿಂದ ಮಾಹಿತಿ ನೀಡಲಾಯಿತು. ಮುಖ್ಯ ಅತಿಥಿಯಾಗಿ ಎಂ.ಸುಬ್ರಹ್ಮಣ್ಯ ಮುಂಡುಗಾರು, ಪಾರ್ವತಿ ವಸಂತಕುಮಾರ್ ಕೋಟೆ, ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆ.ವೆಂಕಪ್ಪಯ್ಯರು ಸ್ವಾಗತಿಸಿ,ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.