ಪೆರಾಜೆ ಕುಂಬಳಚೇರಿ ಹಿ.ಪ್ರಾ.ಶಾಲೆಯಲ್ಲಿ ದಂತ ಆರೋಗ್ಯ ಮಾಹಿತಿ ಕಾರ್ಯಕ್ರಮ

Advt_Headding_Middle
Advt_Headding_Middle

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ ಸಮುದಾಐ ಆಧಾರಿತ ದಂತ ಆರೋಗ್ಯ ಮಾಹಿತಿ ಕಾರ್ಯಕ್ರಮ ಗ್ರಾ.ಪಂ. ಪೆರಾಜೆ, ಕೊಡಗು ಇದರ ಸಹಯೋಗದೊಂದಿಗೆ ಪೆರಾಜೆ ಕುಂಬಳಚೇರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.


ಪುತ್ತೂರು ದರ್ಬೆಯ ಪ್ರಕಾಶ್‌ಕ್ಲಿನಿಕ್‌ನ ವೈದ್ಯರಾದ ಡಾ. ಶ್ರೀಪ್ರಕಾಶ್‌ರವರು ಸಂಪನ್ಮೂಲ ವ್ಯಕ್ತಿಯಾಗಿ ಆರೋಗ್ಯದ ಕುರಿತು ಮಾಹಿತಿ ನೀಡಿ ಹಲ್ಲಿನ ರಕ್ಷಣೆ ಮತ್ತು ಚಿಕಿತ್ಸೆಯ ಕುರಿತು ವಿವರಿಸಿದರು. ಕುಂಬಳಚೇರಿ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಲಲಿತಾರವರು ಅಧ್ಯಕ್ಷತೆ ವಹಿಸಿದ್ದರು.


ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಉದಯಚಂದ್ರ ಕುಂಬಳಚೇರಿ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಧರ್ಮಪಾಲ, ಪುತ್ತೂರು ಫಿಲೋಮಿನಾ ಕಾಲೇನಿಜ ಉಪನಸ್ಯಾಸಕಿ ಶ್ರೀಮತಿ ಪ್ರತಿಭಾ, ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಸಮಾಜಕಾರ್ಯದ ವಿದ್ಯಾರ್ಥಿಗಳಾದ ಅಕ್ಷತಾ ಸ್ವಾಗತಿಸಿದರು. ಶ್ರೇಯಾ ವಂದಿಸಿದರು. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರುಗಳಾದ ಶೀತಲ್‌ಕುಮಾರ್ ಸಚಿನ್‌ಕುಮಾರ್ ಮತ್ತು ದೀಪಿಕಾ ಸಹಕರಿಸಿದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಸಂಪನ್ಮೂಲ ವ್ಯಕ್ತಿಗಳು ಉಚಿತವಾಗಿ ದಂತ ಸ್ವಚ್ಛತಾ ಕಿಟ್‌ಗಳನ್ನು ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.