ವನ್ಯಶ್ರೀ ಹೊಸೋಳಿಕೆಯವರಿಗೆ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

Advt_Headding_Middle
Advt_Headding_Middle

ಪುತ್ತೂರು ಸೈಂಟ್ ಫಿಲೊಮಿನಾ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಅಂತರ್ ಪ್ರೌಢಶಾಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವನ್ಯಶ್ರೀ ಎಚ್.ಸಿ.ಯವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ.


ಈಕೆ ರೋಟರಿ ಪ್ರೌಢಶಾಲಾ 10 ನೇ ತರಗತಿ ವಿದ್ಯಾರ್ಥಿನಿ. ಈಕೆ 2017-18 ನೇ ಸಾಲಿನಲ್ಲಿ ಚಿತ್ರಕಲೆ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದು, ಈಕೆಗೆ ಕ್ರಿಯೇಟಿವ್ ಆರ್ಟ್ಸ್‌ನ ಚಿತ್ರಕಲಾ ಶಿಕ್ಷಕರಾದ ಶ್ರೀಹರಿ ಪೈದೋಂಡಿ ಹಾಗೂ ಪ್ರಸನ್ನ ಐವರ್ನಾಡುರವರು ತರಬೇತಿ ನೀಡಿರುತ್ತಾರೆ. ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ದೃಶ್ಯಕಲೆ ಮತ್ತು ವಿಜ್ಞಾನ ಡ್ರಾಮದಲ್ಲೂ ಬಹುಮಾನ ಪಡೆದಿರುತ್ತಾರೆ. ಇವರು ಸೂರ್ಯ ಎಂಟರ್‌ಪ್ರೈಸಸ್‌ನ ಮಾಲಕರ ಚಂದ್ರಶೇಖರ ಹೊಸೋಳಿಕೆ ಹಾಗೂ ಶಿಕ್ಷಕಿ ಹೇಮಾವತಿ ಬಿ. ಹೊಸೋಳಿಕೆಯವರ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.