Breaking News

ಕೇಂದ್ರ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

Advt_Headding_Middle
Advt_Headding_Middle

ಕುಟುಂಬವನ್ನು ಅರ್ಧ ದಾರಿಯಲ್ಲಿ ಬಿಟ್ಟ ಮೋದಿ ಜನರನ್ನೂ ಅರ್ಧ ದಾರಿಯಲ್ಲಿ ಬಿಡುವುದರಲ್ಲಿ ಸಂಶಯವಿಲ್ಲ – ಎಂ.ಎಸ್.ಮಹಮ್ಮದ್
ತಾಯಿ, ಪತ್ನಿ, ಕುಟುಂಬವನ್ನು ಅರ್ಧ ದಾರಿಯಲ್ಲಿ ಬಿಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈಗ ಭಾರತದ ಜನರನ್ನೂ ಅರ್ಧದಾರಿಯಲ್ಲಿ ಬಿಡುವುದರಲ್ಲಿ ಸಂಶಯವಿಲ್ಲ ಎಂದು ಜಿ.ಪಂ. ಸದಸ್ಯ, ಸುಳ್ಯ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಎಂ..ಎಸ್.ಮಹಮ್ಮದ್ ಹೇಳಿದ್ದಾರೆ.


ಬೆಲೆಯೇರಿಕೆ ಸೇರಿದಂತೆ ಕೇಂದ್ರ ಸರಕಾರದ ಆಡಳಿತ ವೈಫಲ್ಯ ವಿರೋಧಿಸಿ ಯುವ ಕಾಂಗ್ರೆಸ್ ಸುಳ್ಯದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸೈಕಲ್ ಜಾಥಾದ ಕೊನೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸುಳ್ಳು ಬಾಷಣ ಮತ್ತು ಸುಳ್ಳು ಭರವಸೆಗಳಿಂದ ಜನರನ್ನು ಆಕರ್ಷಿಸಿ ಅಧಿಕಾರಿ ಹಿಡಿದ ಬಿಜೆಪಿಯ ಆಡಳಿತ ಅಧೋಗತಿಗಿಳಿದಿದೆ. ಯುಪಿಎ ಸರಕಾರದಲ್ಲಿ ಪೆಟ್ರೋಲ್ ಡೀಸೆಲ್‌ಗೆ 10 ಪೈಸೆ ಏರಿದರೂ ಬೀದಿಗೆ ಬಂದು ಪ್ರತಿಭಟಿಸುತ್ತಿದ್ದ ಬಿಜೆಪಿ ನಾಯಕರು ಈಗ ಬಾಯಿಮುಚ್ಚಿ ಕುಳಿತಿದ್ದಾರೆ. ಜನರ ಜೀವನದೊಂದಿಗೆ ಚೆಲ್ಲಾಟವಾಡುವ ಇಂತಹ ಆಡಳಿತವನ್ನು ಕೊನೆಗಾಣಿಸುವ ನಿರ್ಧಾರವನ್ನು ಜನ ಮಾಡಬೇಕಾಗಿದೆ ಎಂದು ಅವರು ಹೇಳಿದರು.


ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಜನರ ಜೇಬಿಗೆ ಕತ್ತರಿ ಹಾಕುವ ಸರಕರದ ವಿರುದ್ಧ ಪ್ರತಿಭಟನೆ ಅನಿವಾರ್ಯ. ಈ ರೀತಿ ಪ್ರತಿಭಟಿಸಿದರೆ ಮಾತ್ರ ಮೋದಿಯವರಿಗೆ ಬಿಸಿ ತಟ್ಟುತ್ತದೆ. ಪೆಟ್ರೋಲ್, ಡೀಸೆಲ್, ಗ್ಯಾಸ್‌ಗೆ ಬೆಲೆಯೇರಿಕೆ ತಡೆಯಲು ಆಗದಿದ್ದರೆ ಸಂಸದ ಕಟೀಲ್, ಶಾಸಕ ಅಂಗಾರ ರಾಜೀನಾಮೆ ನೀಡಲಿ ಎಂದು ಹೇಳಿದರು.

ಸೋಮವಾರದ ಭಾರತ ಬಂದನ್ನು ಎಲ್ಲರೂ ಬೆಂಬಲಿಸಬೇಕು. ಬಂದ್ ದಿನದಂದು ಬಿಜೆಪಿಯವರೇ ಅಂಗಡಿಗಳಿಗೆ ಕಲ್ಲೆಸೆದು ಸಂಘರ್ಷ ಸೃಷ್ಟಿಸಲು ತಂತ್ರಗಾರಿಕೆ ನಡೆಸುತ್ತಿದ್ದಾರೆ. ಇದರ ಬಗ್ಗೆ ಜನ ಎಚ್ಚರದಿಂದಿರಬೇಕು ಎಂದು ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ.ಶಹೀದ್, ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ಶ್ರೀಮತಿ ದಿವ್ಯಪ್ರಭಾ ಚಿಲ್ತಡ್ಕ ಮೊದಲಾದವರು ಮಾತನಾಡಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೋ ಸ್ವಾಗತಿಸಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರು ವಂದಿಸಿದರು. ಅಲ್ಪಸಂಖ್ಯಾತರ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಮಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾಂಗ್ರೆಸ್ ಮುಖಂಡ ಉಲ್ಲಾಸ್ ಕೋಟ್ಯಾನ್, ಕಾಂಗ್ರೆಸ್ ಮುಖಂಡರುಗಳಾದ ಮಹಮ್ಮದ್ ಕುಂಞಿ ಗೂನಡ್ಕ, ಅಶೋಕ್ ನೆಕ್ರಾಜೆ, ಬೆಟ್ಟ ರಾಜಾರಾಂ ಭಟ್, ಪ್ರವೀಣಾ ರೈ ಮರುವಂಜ, ದಿನೇಶ್ ಅಂಬೆಕಲ್ಲು ತೀರ್ಥರಾಮ ಜಾಲ್ಸೂರು, ಜಿ.ಕೆ.ಹಮೀದ್, ಪಿ..ಎಸ್.ಗಂಗಾಧರ್, ಧನಂಜಯ ಅಡ್ಪಂಗಾಯ, ಕೆ.ಎಂ.ಮುಸ್ತಾಫ, ಪಿ.ಎ.ಮಹಮ್ಮದ್, ನಂದರಾಜ್ ಸಂಕೇಶ, ಸುರೇಶ್ ಅಮೈ, ಶರೀಫ್ ಕಂಠಿ, ಕೆ.ಕೆ. ಹರಿಪ್ರಸಾದ್, ಎನ್.ಜಿ.ಲೋಕನಾಥ ರೈ, ತೀರ್ಥರಾಮ ಪರ್ನೋಜಿ, ಧರ್ಮಪಾಲ ಕೊಯಿಂಗಾಜೆ, ಸುಜಯ ಕೃಷ್ಣ, ಲಕ್ಷ್ಮಣ ಶೆಣೈ, ಯೂಸುಫ್ ಅಂಜಿಕ್ಕಾರ್, ಶಫಿ ಕುತ್ತಮೊಟ್ಟೆ, ಭವಾನಿಶಂಕರ ಕಲ್ಮಡ್ಕ, ಜಯಂತ ಗೌಡ ಕಾಳಮ್ಮನೆ, ನಾಗಕುಮಾರ್ ಶೆಟ್ಟಿ, ಮಿಥುನ್ ಕರ್ಲಪ್ಪಾಡಿ, ಮನ್ಸೂರು ಸುಳ್ಯ, ಮಜೀದ್ ಗಾಂಧಿನಗರ, ಆದಂ ಸಾಹೇಬ್, ಲೋಕೇಶ್ ಆಕ್ರಿಕಟ್ಟೆ, ಗೋಪಾಲಕೃಷ್ಣ ಜಬಳೆ, ತೇಜಕುಮಾರ್ ಬುಡ್ಲೆಗುತ್ತು, ರಾಧಾಕೃಷ್ಣ ಪರಿವಾರಕಾನ, ಜಯಪ್ರಕಾಶ್ ನೆಕ್ರೆಪ್ಪಾಡಿ, ವೆಂಕಟ್ರಮಣ ಇಟ್ಟಿಗುಂಡಿ, ಲಕ್ಷ್ಮಣ ಬೊಳ್ಳಾಜೆ, ರಿಯಾಝ್ ಕಟ್ಟೆಕ್ಕಾರ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.