ಸೆ.13-15: ಜಾಲ್ಸೂರಿನಲ್ಲಿ ೩೩ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Advt_Headding_Middle
Advt_Headding_Middle


ಜಾಲ್ಸೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ೩೩ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವೇ.ಮೂ. ಪುರೋಹಿತ ನಯನಕೃಷ್ಣ ಭಟ್ ರವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ-ಸಭಾ ಕಾರ್ಯಕ್ರಮಗಳೊಂದಿಗೆ ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಸಭಾಭವನದಲ್ಲಿ ಸೆ.೧೩ರಿಂದ ಸೆ.೧೫ರವರೆಗೆ ಜರುಗಲಿದೆ.

ಸೆ.೧೩ರಂದು ಬೆಳಿಗ್ಗೆ ಧ್ವಜಾರೋಹಣ, ಬಳಿಕ ಗಣಪತಿ ಹವನ, ಗಣೇಶ ಪ್ರತಿಷ್ಠೆ ನಡೆಯಲಿದೆ. ಪೂ.೧೦ರಿಂದ ವಿವಿಧ ಸ್ಪರ್ಧೆಗಳು, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರುಗಲಿದೆ. ಸಂಜೆ ತಿಲಕ ಹಚ್ಚುವ ಸ್ಪರ್ಧೆ, ಶಾಸ್ತ್ರೀಯ ಸಂಗೀತ, ಶಾಲಾ ಮಕ್ಕಳಿಂದ ನೃತ್ಯ ವೈಭವ, ಭಜನೆ, ಮಹಾಪೂಜೆ ನಡೆಯಲಿದೆ.

ಸೆ.೧೪ರಂದು ಬೆಳಿಗ್ಗೆ ಮಹಾಪೂಜೆ, ನಾಗತಂಬಿಲ, ಮದ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಹಣತೆ ಉರಿಸುವ ಸ್ಪರ್ಧೆ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈಭವ, ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಮಹಾಪೂಜೆ ಬಳಿಕ ಹಿಂದೂ ಕಲಾಕೇಸರಿ ಅರ್ಪಿಸುವ ತುಳು ಸಾಮಾಜಿಕ ನಾಟಕ ಸತ್ಯದ ಸಾದಿ ಪ್ರದರ್ಶನಗೊಳ್ಳಲಿದೆ.

ಸೆ.೧೫ ರಂದು ಬೆಳಿಗ್ಗೆ, ಮದ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಬಳಿಕ ಶ್ರೀ ವಿಘ್ನನಿವಾರಕನ ವೈಭವದ ಶೋಭಾಯಾತ್ರೆಯು ಜಾಲ್ಸೂರಿನಿಂದ ಹೊರಟು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ಜಲಸ್ಥಂಭನಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.