ದುಗ್ಗಲಡ್ಕ ಹಾಲು ಉತ್ಪಾದಕರ ಮಹಿಳಾ ಸಂಘದಿಂದ ಲೀಟರಿಗೆ 90 ಪೈಸೆ ಬೋನಸ್

Advt_Headding_Middle
Advt_Headding_Middle

2018- 19 ನೇ ಸಾಲಿನಲ್ಲಿ ಸಂಘವು ಉತ್ತಮ ವ್ಯವಹಾರ ನಡೆಸಿ, ರೂ. 3,34,269.73 ಪೈಸೆ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.11 % ಡಿವಿಡೆಂಟ್ ಹಾಗೂ ಪ್ರತೀ ಲೀಟರ್ ಹಾಲಿಗೆ 9೦ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ದುಗ್ಗಲಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರು ಶ್ರೀಮತಿ ಭಾರತಿ ಕೆ.ಯಸ್. ತಿಳಿಸಿದರು.


ಸಂಘದ ವಠಾರದಲ್ಲಿ ನಡೆದ ಸಂಘದ 2017-18 ನೇ ಸಾಲಿನ ಸಂಘದ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದ.ಕ.ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಡಾ.ಕೇಶವ ಸುಳ್ಳಿ, ವಿಸ್ತರಣಾಧಿಕಾರಿ  ಕೆ.ನಾಗೇಶ್ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷೆ ಶ್ರೀಮತಿ ಉಷಾ ಪಿ.ಎಸ್, ನಿರ್ದೇಶಕರಾದ ಶ್ರೀಮತಿ ವಾರಿಜ ಕೆ., ಶ್ರೀಮತಿ ಜಲಜಾಕ್ಷಿ ಎನ್., ಶ್ರೀಮತಿ ಶಾಂತಾ ಕೆ.ಎಸ್. ಶ್ರೀಮತಿ ಶಶಿಪ್ರಭಾ ರೈ, ಶ್ರೀಮತಿ ಚೆನ್ನಮ್ಮ, ಶ್ರೀಮತಿ ಚಂದ್ರಾವತಿ ಬಿ., ಶ್ರೀಮತಿ ಗೀತಾ ಪಿ. ಉಪಸ್ಥಿತರಿದ್ದರು.

ಬಹುಮಾನ ವಿತರಣೆ
ಪ್ರಸ್ತುತ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಶ್ರೀಮತಿ ಹೇಮಾವತಿ ಕೊಕುಳಿ ಪ್ರಥಮ ಸ್ಥಾನ, ಶ್ರೀಮತಿ ಭಾರತಿ ಕೆ.ಎಸ್. ದ್ವಿತೀಯ ಸ್ಥಾನ, ಶ್ರೀಮತಿ ಲೀಲಾವತಿ ಕೆ.ಯಸ್. ತೃತೀಯ ಸ್ಥಾನ ಬಹುಮಾನ ಪಡೆದುಕೊಂಡರು. ಅಲ್ಲದೇ ೫೦೦ಲೀ.ಕ್ಕಿಂತ ಹೆಚ್ಚು ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಕಾರ್ಯದರ್ಶಿ ಶ್ರೀಮತಿ ಪ್ರಿಯಾ ಬಳ್ಳಡ್ಕ ವರದಿ ವಾಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.