ಪಂಜ : ಸೆ.13 ರಿಂದ 15 ತನಕ ಸಾರ್ವಜನಿಕ ಶ್ರೀ ಗಣೇಶೋತ್ಸವ

Advt_Headding_Middle
Advt_Headding_Middle


ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.13,14,15 ತನಕ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳ ವಠಾರದಲ್ಲಿ ವಿವಿಧ ವೈಧಿಕ,ಧಾರ್ಮಿಕ,ಸಾಂಸ್ಕೃತಿಕ,ಭಜನಾ ಸಂಕೀರ್ತನೆ ಹಾಗೂ ಸ್ಪರ್ಧಾ ಕಾರ‍್ಯಕ್ರಮಗಳೊಂದಿಗೆ ಜರುಗಲಿದೆ
ಸೆ.೧೩.ರಂದು ಮುಂಜಾನೆ ಪ್ರತಿಷ್ಥೆ,ಗಣಪತಿ ಹೋಮ ಮೊದಲಾದ ವೈಧಿಕ ಕಾರ್ಯಕ್ರಮಗಳು ಜರುಗಲಿದೆ.ಕ್ರೀಡಾ ಸ್ಪರ್ಧೆಯನ್ನು ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ತುಕರಾಮ ಏನೆಕಲ್ಲು ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಜೇಸಿಐ ಪಂಜ ಪಂಚಶ್ರೀ ಯ ಅಧ್ಯಕ್ಷ ಗುರುಪ್ರಸಾದ್ ತೋಟ ಉದ್ಘಾಟಿಸಲಿದ್ದಾರೆ.ಅಂಗನವಾಡಿ ಮತ್ತು ಎಲ್ ಕೆ ಜಿ ಹಾಗೂ ಯು ಕೆ ಜಿ ಮಕ್ಕಳಿಗೆ ಕಪ್ಪೆ ಜಿಗಿತ,ಕಾಳು ಹೆಕ್ಕವುದು, ಮಹಿಳೆಯರಿಗೆ ಮೂರು ಕಾಲಿನ ಓಟ ,ಸ್ಕಿಪ್ಟಿಂಗ್(ಹಗ್ಗ ಜಿಗಿತ),ಹುಡುಗಿಗೆ ಜಡೆ ಬರೆಯುವುದು,ಮಡಿಕೆ ಒಡೆಯುವುದು, ಪುರುಷರಿಗೆ ನಿಧಾನ ದ್ವಿ ಚಕ್ರ ವಾಹನ ಚಾಲನೆ, ನಿಧಾನ ಸೈಕಲ್ ಚಾಲನೆ, ಮುಕ್ತ ವಾಲಿಬಾಲ್ ಪ್ರಥಮ ೨ ಸಾವಿರ ರೂ ನಗದು,ದ್ವಿತೀಯ ೧ ಸಾವಿರ ರೂ ನಗದು ಬಹುಮಾನವಿರುತ್ತದೆ, ಸೂರ್ಯ-ಹೊನಲು ಬೆಳಕಿನ ೬೫ ಕೆ ಜಿ ಕಬಡ್ಡಿ ಪಂದ್ಯಾಟ ಪ್ರಥಮ ೫ ಸಾವಿರ ರೂ ನಗದು, ದ್ವಿತೀಯ ೩ ಸಾವಿರ ರೂ ನಗದು ಮತ್ತು ಸೆಮಿಫೈನಲ್ಲಿ ನಿರ್ಗಮಿತ ತಂಡಗಳಿಗೆ ತಲಾ ೧ ಸಾವಿರ ರೂ ನಗದು ಬಹುಮಾನ ವಿರುತ್ತದೆ. ಸಾಂಸ್ಕೃತಿಕ ಸ್ಪಧೆಯು ಕಿರಿಯ,ಹಿರಿಯ,ಮಹಿಳಾ ವಿಭಾಗ,ಸಾರ್ವಜನಿಕ ವಿಭಾಗದಲ್ಲಿ ರಂಗೋಲಿ, ರಸಪ್ರಶ್ನೆ,ಭಾಷಣ, ಭಕ್ತಿಗೀತೆ ಮತ್ತು ಛದ್ಮವೇಷ ಸ್ಪರ್ಧೆಗಳಿರುತ್ತದೆ.

ಸೆ.೧೪ರಂದು ಮುಂಜಾನೆಯಿಂದ ವೈಧಿಕ ಕಾರ್ಯಕ್ರಮಗಳು ಜರುಗಲಿದೆ.ಸಂಜೆ ೫ ರಿಂದ ಧೀಶಕ್ತಿ ಮಹಿಳಾ ಯಕ್ಷಬಳಗ ಇವರಿಂದ ಯಕ್ಷಗಾನ ತಾಳಮದ್ದಳೆ, ನಂತರ ಸಭಾ ಕಾರ‍್ಯಕ್ರಮದಲ್ಲಿ ಬಹುಮಾನ ವಿತರಣೆ ಜರುಗಲಿದೆ. ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಧ್ಯಕ್ಷ ಮಹಾಬಲ ಕುಳ ಅಧ್ಯಕ್ಷತೆ ವಹಿಸಲಿದ್ದಾರೆ.ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸ ರೋಹಿಣಾಕ್ಷ ಶಿರ್ಲಾಲು ಉಪನ್ಯಾಸ ನೀಡಲಿದ್ದಾರೆ.ಮುಖ್ಯ ಅತಿಥಿಯಾಗಿ ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯು ಸುಬ್ರಾಯ ಗೌಡ ಉಪಸ್ಥಿತರಿರುವರು. ಬಳಿಕ ರಾತ್ರಿ ೯.೩೦ ರಿಂದ ಕೆ ಎಸ್ ಎಸ್ ಕಾಲೇಜಿನ ಸಂಸ್ಕೃತಿ ಸೌರಭ ಸಾಂಸ್ಕೃತಿಕ ತಂಡದವರಿಂದ ನೃತ್ಯ ವೈವಿಧ್ಯ ನಡೆಯಲಿದೆ.

ಶೋಭಾಯಾತ್ರೆ :ಸೆ.೧೫ ರಂದು ಮುಂಜಾನೆಯಿಂದ ವೈಧಿಕ ಕಾರ್ಯಕ್ರಮಗಳು ಜರುಗಲಿದೆ.ಸಂಜೆ ೩ ರಿಂz ಆಕರ್ಷಣೆಯ ಶೋಭಾಯಾತ್ರೆಯು ದೇವಳ ವಠಾರದಿಂದ ಹೊರಟು ಪಂಜ ಪೇಟೆಯ ಮೂಲಕ ಸಾಗಿ ಪಲ್ಲೋಡಿ ಎಂಬಲ್ಲಿ ಪಂಜ ಹೊಳೆಯ ನಾಗತೀರ್ಥ ಸಂಗಮದಲ್ಲಿ ಜಲಸ್ತಂಭನ ಜರುಗಲಿದೆ. ಶ್ರೀ ದುರ್ಗಾ ಭಜನಾ ಮಂಡಳಿ ಮರಕತ, ಶ್ರೀರಾಮ ಭಜನಾ ಮಂಡಳಿ ಎಣ್ಮೂರು ತಂಡದವರಿಂದ ನೃತ್ಯ ಭಜನೆ, ಶ್ರೀ ಮಹಾವಿಷ್ಣು ಬಾಳಿಲ ತಂಡದವರಿಂದ ಸಿಂಗಾರಿ ಮೇಳ ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.