ಕಮಿಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ- ಧರ್ಮದ ಉಳಿವಿಗೆ ಸಾಮೂಹಿಕ ಆಚರಣೆ ಅಗತ್ಯ: ಕೇಶವ ಭಟ್

Advt_Headding_Middle
Advt_Headding_Middle

ಹಿಂದೂ ಧರ್ಮವು ಉಳಿವು ಇಂದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಆಚರಣೆಗಳು ಹೆಚ್ಚು ಮಹತ್ವ ಪಡೆದಿದೆ ಎಂದು ಗುತ್ತಿಗಾರು ಸಹಕಾರಿ ಬ್ಯಾಂಕ್ ಅಧ್ಯಕ್ಷ ಮುಳಿಯ ಕೇಶವ ಭಟ್ ಹೇಳಿದರು.
ಅವರು ಭಾನುವಾರ ಕಮಿಲದ ಬಾಂಧವ್ಯ ಗೆಳೆಯರ ಬಳಗದ ವತಿಯಿಂದ ಶ್ರೀ ರಕ್ತೇಶ್ವರಿ ಸಾನ್ನಿಧ್ಯದ ವಠಾರದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಅತಿಥಿಯಾಗಿ ಮಾತನಾಡಿದರು. ಧರ್ಮದ ಮೇಲೆ ಸವಾರಿಗಳು ಆಗಾಗ ನಡೆಯುತ್ತಲೇ ಇದೆ. ಮತಾಂತರದಿಂದ ತೊಡಗಿ ಹಿಂದೂ ಆಚರಣೆಗಳ ಮೇಲೂ ಇತ್ತೀಚೆಗೆ ದಬ್ಬಾಳಿಕೆ ನಡೆಯುತ್ತಿದೆ. ಇದೆಲ್ಲವನ್ನೂ ಇಂದು ಸಂಘಟಿತವಾಗಿ ಎದುರಿಸಬೇಕಾಗಿದೆ. ಇದಕ್ಕಾಗಿ ಸಾಮೂಹಿಕ ಆಚರಣೆಗಳಲ್ಲಿ ಎಲ್ಲರೂ ಒಂದಾಗಿ ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಮಿಲ ಶ್ರೀ ರಕ್ತೇಶ್ವರಿ ಸಾನ್ನಿಧ್ಯದ ಆಡಳಿತ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ಸಂಪ್ಯಾಡಿ, ಶ್ರೀಕೃಷ್ಣ ಪರಮಾತ್ಮ ಎಲ್ಲರ ಬದುಕಿಗೆ ಒಳಿತನ್ನು ನೀಡಿದ್ದಾನೆ. ಹೀಗಾಗಿ ಪ್ರತೀ ದಿನ ಧರ್ಮಾಚರಣೆ ಹಾಗೂ ದೇವರ ಮೇಲಿನ ನಂಬಿಕೆಯಿಂದ ಒಳಿತು ಸಾಧ್ಯ ಎಂದರು.
ಅತಿಥಿಗಳಾಗಿದ್ದ ಎಪಿಎಂಸಿ ಸದಸ್ಯೆ ಜಯಲಕ್ಷ್ಮೀ ಚಿಕ್ಮುಳಿ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಮಾತನಾಡಿ ಶುಭಹಾರೈಸಿದರು. ಬಾಂಧವ್ಯ ಗೆಳೆಯರ ಬಳಗದ ಅಧ್ಯಕ್ಷ ಭರತ್ ಕಾಂತಿಲ ಸಭಾಧ್ಯಕ್ಷತೆ ವಹಿಸಿದ್ದರು.
ಬಾಂಧವ್ಯ ಗೆಳೆಯರ ಬಳಗದ ಸದಸ್ಯ ಲೋಕೇಶ್ ಕಮಿಲ ಸ್ವಾಗತಿಸಿ ಕಾರ್ಯದರ್ಶಿ ತುಂಗನಾಥ ಕಾಯನಕೋಡಿ ವಂದಿಸಿದರು. ದಾಮೋದರ ನೇರಳ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಸ್ಫರ್ಧಾ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.