ನಿರಾಶ್ರಿತ ವಿದ್ಯಾರ್ಥಿಗೆ ಎನ್.ಎಂ.ಸಿ.ಯಿಂದ ಸಹಾಯ ಹಸ್ತ

Advt_Headding_Middle
Advt_Headding_Middle

ಜಲಪ್ರಳಯ-ಭೂಕುಸಿತದಿಂದ ಮನೆ, ಮಠ ಕಳೆದುಕೊಂಡು ಸಾವಿರಾರು ಜನ ಕಷ್ಟಕ್ಕೀಡಾದ ಕೊಡಗು ಮತ್ತು ದ.ಕ. ಜಿಲ್ಲೆಗಳ ಗಡಿ ಭಾಗದ ಸ್ಥಳಗಳಾದ ಜೋಡುಪಾಲ, ಮೊಣ್ಣಂಗೇರಿಗಳಲ್ಲಿ ಸಂಭವಿಸಿದ ಈ ಭೂಕುಸಿತದಿಂದ ನಿರಾಶ್ರಿತರಾದವರಿಗೆ ಈಗಾಗಲೇ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ಆಹಾರ, ಬಟ್ಟೆ ಇತ್ಯಾದಿ ಜೀವನಾವಶ್ಯಕ ಅಗತ್ಯ ವಸ್ತುಗಳನ್ನು ಉದಾರವಾಗಿ ಕೊಡಮಾಡಿದೆ. ಇದೀಗ ವಿದ್ಯಾರ್ಥಿನಿಯೊಬ್ಬಳಿಗೆ ಧನ ಸಹಾಯದ ಮೂಲಕ ಅಭಯ ಹಸ್ತವನ್ನು ನೀಡಿದೆ.


ನೆಹರೂ ಮೆಮೋರಿಯಲ್ ಕಾಲೇಜಿನ ಅಂತಿಮ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ ಪೂರ್ಣಿಮ ಎನ್ ಕೆ ಮೂಲತಃ ಕೊಡಗಿನ ಜೋಡುಪಾಲದ ನಿವಾಸಿಯಾಗಿದ್ದು, ಅವಳ ಕುಟುಂಬ ವಾಸವಾಗಿದ್ದ ಮನೆ ಸಂಪೂರ್ಣವಾಗಿ ಜಲಪ್ರಳಯಕ್ಕೆ ತುತ್ತಾಗಿದೆ. ಮನೆ ವಾಸಿಗಳು ಪಾರಾಗಿ ಬದುಕಿ ಉಳಿದಿದ್ದಾರೆ. ಅವರೀಗ ನಿರಾಶ್ರಿತರ ಶಿಬಿರದಲ್ಲಿದ್ದಾರೆ. ವಿದ್ಯಾರ್ಥಿನಿ ಸುಳ್ಯದ ಹಿಂದುಳಿದ ವರ್ಗದವರಿಗಾಗಿರುವ ವಿದ್ಯಾರ್ಥಿ ನಿಲಯದಲ್ಲಿದ್ದು ತರಗತಿಗೆ ಹಾಜರಾಗುತ್ತಿದ್ದಾಳೆ.

ವಿದ್ಯಾರ್ಥಿನಿಯ ಕುಟುಂಬದ ಅಸಹಾಯಕತೆಯನ್ನು ಪರಿಗಣಿಸಿದ ಕಾಲೇಜಿನ ಅಧ್ಯಾಪಕ ಮತ್ತು ವಿದ್ಯಾರ್ಥಿ ಬಳಗ ಸಂಗ್ರಹಿಸಿದ ರೂಪಾಯಿ ಮೂವತ್ತೈದು ಸಾವಿರಗಳನ್ನು ಸದುಪಯೋಗದ ದೃಷ್ಟಿಯಿಂದ ನೇರ ವಿದ್ಯಾರ್ಥಿನಿಯ ಕುಟುಂಬಕ್ಕೆ ಹಸ್ತಾಂತರಿಸಿದೆ. ಸಹಾಯ ಹಸ್ತ ನೀಡಿದ ತಂಡದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರಿಧರ ಗೌಡ ಕೆ, ವಿದ್ಯಾರ್ಥಿ ಕ್ಷೇಮಪಾಲಕರಾದ ಡಾ. ಪೂವಪ್ಪ ಕಣಿಯೂರು, ಎನ್ ಸಿ ಸಿ ಅಧಿಕಾರಿ ಸೀತಾರಾಮ ಎಂ ಡಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಜೀವಿತ್ ಡಿ ಎಸ್, ಶುತಿ ಯು ಜೆ, ಕೌಶಲ್ ಪಿ ಆರ್. ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.