ಪಂಬೆತ್ತಾಡಿಯಲ್ಲಿ ಕೃಷಿಕನ ಹತ್ಯೆ ಪ್ರಕರಣ – ಸಂಶಯಿತರು ಪೊಲೀಸ್ ವಶ

Advt_Headding_Middle
Advt_Headding_Middle

ಪಂಬೆತ್ತಾಡಿ ಗ್ರಾಮದ ಕಲ್ಚಾರು ಸುಬ್ರಹ್ಮಣ್ಯ ಭಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಂಶಯದ ಆಧಾರದ ಮೇಲೆ  ಪೊಲೀಸರು ಕಾಣಿಯೂರಿನ ನಾಲ್ವರು ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.

 

ಪಂಬೆತ್ತಾಡಿಯ ಕೃಷಿಕ ಕಲ್ಚಾರು ಸುಬ್ರಹ್ಮಣ್ಯ ಭಟ್ ರ ಮೃತದೇಹ ಅವರ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಸೆ.8ರಂದು ಪತ್ತೆಯಾಗಿದ್ದು, ಯಾರೋ ಅವರನ್ನು ಕೊಂದು ಅಡಿಕೆ ಅಪಹರಿಸಿರಬೇಕೆಂದು ಸಂಶಯ ಉಂಟಾಗಿತ್ತು.

 ಕಲ್ಚಾರು ಸುಬ್ರಹ್ಮಣ್ಯ ಭಟ್‌ರವರ   ಮನೆಯಂಗಳದಲ್ಲಿದ್ದ  ಟರ್ಪಾಲ್ ನ ಮೇಲ್ಗಡೆಯಿಂದ ಪಿಕಪ್ ವಾಹನದ ಟಯರ್  ನ ಗುರುತು ಇದ್ದುದರಿಂದ ಹಾಗೂ ಕಲ್ಚಾರು ಸುಬ್ರಹ್ಮಣ್ಯ ಭಟ್‌ರವರು ಜೀವವಿದ್ದಿದ್ದರೆ ಟರ್ಪಾಲಿನ ಮೇಲ್ಗಡೆಯಿಂದ ವಾಹನ ಹಾದು ಹೋಗಲು ಬಿಡುವವರಲ್ಲವೆಂಬ ಅಭಿಪ್ರಾಯವಿರುವುದರಿಂದ  ಆ ದಿಸೆಯಲ್ಲಿ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದರು. 

ಕಾಣಿಯೂರಿನ ನಾಲ್ವರು 10ದಿನಗಳ ಹಿಂದೆ ಸುಬ್ರಹ್ಮಣ್ಯ ಭಟ್‌ ರವರ ಮನೆಗೆ ಅಡಿಕೆ ಸುಲಿಯಲು ಬಂದಿದ್ದರೆಂಬ ಮಾಹಿತಿ ಪಡೆದ ಪೊಲೀಸರು ಆ ನಾಲ್ವರನ್ನು ಮತ್ತು ಇತರ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆಂದೂ, ಪ್ರಕರಣದ ಬಗ್ಗೆ ಮಹತ್ತರ ಸುಳಿವು ದೊರೆಕಿರುವುದಾಗಿಯೂ ತಿಳಿದು ಬಂದಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.