Breaking News

ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ 22 ಚಾತುರ್ಮಾಸ ಪ್ರಯುಕ್ತ ಸುಧರ್ಮ ಸಭೆ

Advt_Headding_Middle
Advt_Headding_Middle


ಶ್ರೀ ಕುಕ್ಕೆ ಸುಬ್ರಹ್ಮಣ್ಯ ಭಕ್ತವೃಂದದ ನೇತೃತ್ವದಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ 22 ಚಾರ್ತುಮಾಸ ಪ್ರಯುಕ್ತ ಸುಧರ್ಮ ಸಭೆ ಸೆ.11 ರಂದು ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ನಡೆಯಿತು.

ಶ್ರೀಗಳಾದ ವಿದ್ಯಾಪ್ರಸನ್ನ ಅವರು ಆರ್ಶೀವಚನ ನೀಡುತ್ತಾ ಯಾರನ್ನೂ ಹಿಂಸಿಸದೇ ಬದುಕುವುದೇ ಧರ್ಮ. ಇನ್ನೊಬ್ಬರ ಹಿತಕ್ಕೋಸ್ಕರ ಬದುಕುವುದೇ ಧರ್ಮ, ಧರ್ಮ ಅಂದರೆ ಆಚಾರ, ಅದರ ಹಿಂದೆ ದೈವೀ ಶಕ್ತಿ ಇದೆ ಎಂದರು.


ಸಭಾ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ದ ಕಾರ್ಯಾಧ್ಯಕ್ಷ ಎಂ.ಬಿ ಪುರಾಣಿಕ್ ವಹಿಸಿದ್ದರು. ಹಿಂದೂ ಧಾರ್ಮಿಕ ನೇತಾರ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾರ್ಮಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಯಕ್ಷ ಧುವ ಫೌಡೇಶನ್ ನ ಸ್ಥಾಪಾಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಶ್ರೀ ಕ್ಷೇತ್ರ ಹನಮಗಿರಿ ಈಶ್ವರ ಮಂಗಲ ಧರ್ಮದರ್ಶಿ ನನ್ಯ ಅಚ್ಚುತ ಮೂಡಿತ್ತಾಯ, ಮಂಗಳೂರು ಮಹಾನಗರ ಪಾಲಿಕೆಯ ನಾಮ ನಿರ್ದೇಶಿತ ಸದಸ್ಯ ಐ ರಾಮದಾಸ್ ಪ್ರಭು, ಉದ್ಯಮಿ ಅರವಿಂದ ಅತಿಥಿಗಳಾಗಿ ಉಪಸ್ಥಿತರಿದ್ದರು. ಆರಂಭದಲ್ಲಿ ವೇದ ಘೋಷ ದ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು. ಸ್ವಾಗತ ಕುಕ್ಕೆ ಸುಬ್ರಹ್ಮಣ್ಯ ಭಕ್ತ ವೃಂದ ಇದರ ಅಧ್ಯಕ್ಷ ಶ್ಯಾಮ ಸುದರ್ಶನ ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.