ಪಂಜ : ಸಾರ್ವಜನಿಕ ಶ್ರೀ ಗಣೇಶೋತ್ಸವ : ಕ್ರೀಡಾ-ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ

Advt_Headding_Middle
Advt_Headding_Middle
Advt_Headding_Middle

ಗಣಪನ ಆರಾಧನೆಯಿಂದ ನಾಡಿಗೆ ಶ್ರೇಯಸ್ಸು- ತುಕರಾಮ ಏನೆಕಲ್ಲು


“ಕ್ರೀಡಾ-ಸಾಂಸ್ಕೃತಿಕ ಕಾರ‍್ಯಕ್ರಮಗಳು,ಸ್ಪರ್ಧೆಗಳು ಪ್ರತಿಭೆಗಳನ್ನು ಅನಾವರಣ ಗೊಳಿಸುತ್ತದೆ.ಈ ಮೂಲಕ ಜನರು ಸಂಘಟನೆಗಳೊಂದಿಗೆ ಇರುತ್ತಾರೆ.ಸಂಘಟನೆ ಮೂಲಕ ಗಣಪನ ಆರಾಧನೆಯಿಂದ ನಾಡಿಗೆ ಶ್ರೇಯಸ್ಸು” ಎಂದು ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ತುಕರಾಮ ಏನೆಕಲ್ಲು ಹೇಳಿದರು. ಅವರು ಸೆ.೧೩.ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳ ವಠಾರದಲ್ಲಿ ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಪ್ರಯುಕ್ತ ಜರುಗಿದ ಕ್ರೀಡಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಾಂಸ್ಕೃತಿಕ ಸ್ಪರ್ಧೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಗುರುಪ್ರಸಾದ್ ತೋಟ ಉದ್ಘಾಟಿಸಿದರು. ಉತ್ಸವ ಸಮಿತಿ ಅಧ್ಯಕ್ಷ ಮಹಾಬಲ ಕುಳ ಅಧ್ಯಕ್ಷತೆ ವಹಿಸಿದ್ದರು. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ಗೋಪಾಲಕೃಷ್ಣ ಭಟ್ ,ಸಾರ್ವಜನಿಕ ಆರಾಧನಾ ಸಮಿತಿ ಗೌರವಾಧ್ಯಕ್ಷ ಟಿ.ಜಿ.ಮುಡೂರು,ಅಧ್ಯಕ್ಷ ಬಾಲಕೃಷ್ಣ ಗೌಡ ಕುದ್ವ, ಕಾರ್ಯದರ್ಶಿ ಸವಿತಾರ ಮುಡೂರು, ಉತ್ಸವ ಸಮಿತಿ ಕಾರ್ಯದರ್ಶಿ ವಿಶ್ವನಾಥ ಸಂಪ,ಕ್ರೀಡಾ ಸ್ಪರ್ಧೆಗಳ ಸಂಚಾಲಕ ಯೋಗೀಶ್ ಚಿದ್ಗಲ್, ಸಾಂಸ್ಕೃತಿಕ ಸ್ಪರ್ಧೆಗಳ ಸಂಚಾಲಕ ಧ್ರುವಕುಮಾರ್ ಕಂಬಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ‍್ಯಕ್ರಮದಲ್ಲಿ ಶ್ಯಾಮ್ ಕೃಷ್ಣನಗರ ಪ್ರಾರ್ಥಿಸಿದರು.ಉತ್ಸವ ಸಮಿತಿಯ ಉಪಾಧ್ಯಕ್ಷ ಸೀತಾರಾಮ ಕುದ್ವ ಸ್ವಾಗತಿಸಿದರು.ತೀರ್ಥಾನಂದ ಕೊಡಂಕಿರಿ ನಿರೂಪಿಸಿದರು.ವಿಶ್ವನಾಥ ಸಂಪ ವಂದಿಸಿದರು.

ಸೆ.೧೪ರಂದು ಮುಂಜಾನೆಯಿಂದ ವೈಧಿಕ ಕಾರ್ಯಕ್ರಮಗಳು ಜರುಗಲಿದೆ.ಸಂಜೆ ೫ ರಿಂದ ಧೀಶಕ್ತಿ ಮಹಿಳಾ ಯಕ್ಷಬಳಗ ಇವರಿಂದ ಯಕ್ಷಗಾನ ತಾಳಮದ್ದಳೆ, ನಂತರ ಸಭಾ ಕಾರ‍್ಯಕ್ರಮದಲ್ಲಿ ಬಹುಮಾನ ವಿತರಣೆ ಜರುಗಲಿದೆ. ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಧ್ಯಕ್ಷ ಮಹಾಬಲ ಕುಳ ಅಧ್ಯಕ್ಷತೆ ವಹಿಸಲಿದ್ದಾರೆ.ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸ ರೋಹಿಣಾಕ್ಷ ಶಿರ್ಲಾಲು ಉಪನ್ಯಾಸ ನೀಡಲಿದ್ದಾರೆ.ಮುಖ್ಯ ಅತಿಥಿಯಾಗಿ ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯು ಸುಬ್ರಾಯ ಗೌಡ ಉಪಸ್ಥಿತರಿರುವರು. ಬಳಿಕ ರಾತ್ರಿ ೯.೩೦ ರಿಂದ ಕೆ ಎಸ್ ಎಸ್ ಕಾಲೇಜಿನ ಸಂಸ್ಕೃತಿ ಸೌರಭ ಸಾಂಸ್ಕೃತಿಕ ತಂಡದವರಿಂದ ನೃತ್ಯ ವೈವಿಧ್ಯ ನಡೆಯಲಿದೆ.

ಶೋಭಾಯಾತ್ರೆ :ಸೆ.೧೫ ರಂದು ಮುಂಜಾನೆಯಿಂದ ವೈಧಿಕ ಕಾರ್ಯಕ್ರಮಗಳು ಜರುಗಲಿದೆ.ಸಂಜೆ ೩ ರಿಂz ಆಕರ್ಷಣೆಯ ಶೋಭಾಯಾತ್ರೆಯು ದೇವದ ವಠಾರದಿಂದ ಹೊರಟು ಪಂಜ ಪೇಟೆಯ ಮೂಲಕ ಸಾಗಿ ಪಲ್ಲೋಡಿ ಎಂಬಲ್ಲಿ ಪಂಜ ಹೊಳೆಯ ನಾಗತೀರ್ಥ ಸಂಗಮದಲ್ಲಿ ಜಲಸ್ತಂಭನ ಜರುಗಲಿದೆ. ಶ್ರೀ ದುರ್ಗಾ ಭಜನಾ ಮಂಡಳಿ ಮರಕತ, ಶ್ರೀರಾಮ ಭಜನಾ ಮಂಡಳಿ ಎಣ್ಮೂರು ತಂಡದವರಿಂದ ನೃತ್ಯ ಭಜನೆ, ಶ್ರೀ ಮಹಾವಿಷ್ಣು ಬಾಳಿಲ ತಂಡದವರಿಂದ ಸಿಂಗಾರಿ ಮೇಳ ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಲಿದೆ. ಸೆ.೧೩,೧೪,೧೫ ತನಕ ವಿವಿಧ ವೈಧಿಕ,ಧಾರ್ಮಿಕ,ಸಾಂಸ್ಕೃತಿಕ,ಭಜನಾ ಸಂಕೀರ್ತನೆ ಹಾಗೂ ಸ್ಪರ್ಧಾ ಕಾರ‍್ಯಕ್ರಮಗಳೊಂದಿಗೆ ಉತ್ಸವ ಜರುಗಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.