ಕೊಯಿಕುಳಿಯಲ್ಲಿ ಬಾಲಕರು ಪೂಜಿಸುವ ಬಾಲಗಣಪ

Advt_Headding_Middle
Advt_Headding_Middle

ಬಾಲಕರು ಸೇರಿಕೊಂಡು ಸತತ ಎಂಟು ವರ್ಷ ಗಳಿಂದ ಗಣೇಶೋತ್ಸವ ನಡೆಸುತ್ತಾ ಬರುತ್ತಿದ್ದಾರೆ. ಇದು ಕಂಡು ಬರುವುದು ದುಗಲಡ್ಕ ಸಮೀಪದ ಕೊಯಿಕುಳಿ ಶಾಲಾ ಬಳಿ. ಮಾವಿನ ಮರದ ಕೆಳಗೆ ಬಾಲಕರೇ ಚಪ್ಪರ ಹಾಕಿ ತಳಿರು ತೋರಣ ಕಟ್ಟಿ, ವೇದಿಕೆ ನಿರ್ಮಿಸಿ ಪುಟ್ಟ ಗಣಪನ ಪ್ರತಿಷ್ಟಾಪನೆ ಮಾಡಿದ್ದಾರೆ. ಸ್ಥಳೀಯ ಬಾಲಕರು ಸೇರಿಕೊಂಡು ಸಮಿತಿಯನ್ನು ಮಾಡಿಕೊಂಡು ಜಾತಿ ಭೇದವಿಲ್ಲದೆ ಕೆಲಸ ಮಾಡಿದ್ದಾರೆ.

ಮಾವಿನ ಮರದ ಆಶ್ರಯದಲ್ಲಿ ಚಪ್ಪರ ಹಾಕಿ ,ಸ್ಥಳೀಯರಿಂದ ಧನ ಸಂಗ್ರಹಿಸಿ ಆಮಂತ್ರಣವನ್ನು ಮುದ್ರಿಸಿ ಚಪ್ಪರವನ್ನು ತಳಿರು ತೋರಣಗಳಿಂದ ಶೃಂಗರಿಸಿ ಉತ್ಸವ ನಡೆಸುತ್ತಾರೆ. ಬೆಳಿಗ್ಗೆ ಗಣಪತಿ ಪ್ರತಿಷ್ಠೆಯಾಗಿ ಮಧ್ಯಾಹ್ನದ ಪೂಜೆ , ಪ್ರಸಾದ ವಿತರಣೆ ನಡೆಯುತ್ತದೆ. ಸಂಜೆ ಶೋಭಾಯಾತ್ರೆ ನಡೆದು ವಿಗ್ರಹ ಜಲಸ್ಥಂಭನಗೊಳ್ಳುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.