Breaking News

ಪಾಲೆಪ್ಪಾಡಿ ಗಣಪತಿಯ ವೈಭವದ ಶೋಭಾಯಾತ್ರೆ- ನೂರಾರು ಜನ ಭಾಗಿ

Advt_Headding_Middle
Advt_Headding_Middle

 

ಐವರ್ನಾಡು ಗ್ರಾಮದ ಮಂಜುಶ್ರೀ ಗೆಳೆಯರ ಬಳಗ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪಾಲೆಪ್ಪಾಡಿಯಲ್ಲಿ ನಡೆದ ಗಣೇಶೋತ್ಸವದ ವೈಭವದ ಶೋಭಾಯಾತ್ರೆಯು ಸೆ.14 ರಂದು ನಡೆಯಿತು.

ಬ್ಯಾಂಡ್ ವಾದ್ಯ ಘೋಷಗಳೊಂದಿಗೆ ನಡೆದ ಶೋಭಾಯಾತ್ರೆಯು ಪಾಲೆಪ್ಪಾಡಿಯಿಂದ ಹೊರಟು ಐವರ್ನಾಡು ಮುಖ್ಯ ರಸ್ತೆಯಲ್ಲಿ ಸಾಗಿ ಬಾಂಜಿಕೋಡಿಯಲ್ಲಿ ಜಲಸ್ತಂಭನ ಮಾಡಲಾಯಿತು.ನೂರಾರು ಜನ ಭಕ್ತಾಭಿಮಾನಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಆಕರ್ಷಕ ವಾಗಿ ಲೈಟಿಂಗ್ಸ್ ನಿಂದ ಮತ್ತು ಹೂವಿನಿಂದ ವಿಶೇಷವಾಗಿ ಅಲಂಕರಿಸಿದ ವಾಹನದಲ್ಲಿ ಶೋಭಾಯಾತ್ರೆ ನಡೆಯಿತು.ಯುವಕರ ತಂಡದ ಕುಣಿತ ನೋಡುಗರನ್ನು ಆಕರ್ಷಿಸಿತ್ತು. ಅಲ್ಲಲ್ಲಿ ದಾರಿಯುದ್ದಕ್ಕೂ ಶ್ರೀ ಗಣಪತಿಗೆ ಪೂಜೆಗಳು ನಡೆದವು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.