ಗಣೇಶೋತ್ಸವ ರಾಷ್ಟ್ರೀಯ ಆಯಾಮ ಎಂಬುವುದನ್ನು ಮೆರೆಯಬಾರದು – ಉಪನ್ಯಾಸಕ ರೋಹಿಣಾಕ್ಷ ಶಿರ್ಲಾಲು

Advt_Headding_Middle
Advt_Headding_Middle

ಪಂಜ : ಸಾರ್ವಜನಿಕ ಶ್ರೀ ಗಣೇಶೋತ್ಸವ-ಸಭಾ ಕಾರ್ಯಕ್ರಮ

‘ಪುರಾಣಗಳ ಕಾಲದಂದಲೇ ಆರಾಧನೆಯ ಒಂದು ಶಕ್ತಿಯಾಗಿ ಆರಾಧಿಸಲ್ಪಟ್ಟ ಶ್ರೀಗಣೇಶ ದೇವನಿಗೆ ಧಾರ್ಮಿಕ ಹಿನ್ನಲೆ ಇದೆ. ಈ ದೇಶದಲ್ಲಿ ಗಣೇಶನ ಆರಾಧನೆ ಮತ್ತಷ್ಟು ಪ್ರಖ್ಯಾತ ಪಡೆದದ್ದು ರಾಷ್ಟ್ರೀಯ ಹಿನ್ನಲೆಯ ಪ್ರಧಾನವಾದ ಕಾರ್ಯಕ್ರಮವಾಗಿ. ಆದ್ದರಿಂದ ಗಣೇಶೋತ್ಸವ ಧಾರ್ಮಿಕ ಆಯಾಮ ಮತ್ತು ರಾಷ್ಟ್ರೀಯ ಆಯಾಮ ಎಂಬುವುದನ್ನು ಮರೆಯಬಾರದು’. ಎಂದು ಪುತ್ತೂರು ವಿವೇಕಾನಂದ ಕಾಲೇಜು ಉಪನ್ಯಾಸಕ ರೋಹಿಣಾಕ್ಷ ಶಿರ್ಲಾಲು ಹೇಳಿದರು. 

ಅವರು ಸೆ.೧೪.ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳ ವಠಾರದಲ್ಲಿ ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಪ್ರಯುಕ್ತ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಬೆಳ್ಳಾರೆ ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಯು ಸುಬ್ರಾಯ ಗೌಡ ಮಾತನಾಡಿ ‘ಸ್ವಾತಂತ್ರ ಪೂರ್ವದಲ್ಲಿ ಗಣಪನನ್ನು ಮನೆಯಲ್ಲಿಯೇ ಆರಾಧಿಸುತ್ತಿದ್ದರು. ಬಾಲಗಂಗಾಧರ ತಿಲಕರು ಅದನ್ನು ಸಾರ್ವಜನಿಕವಾಗಿ ತಂದರು. ಅದು ಅಂದಿನ ಕಾಲ ಘಟದಲ್ಲಿ ಅನಿವಾರ‍್ಯವಾಗಿತ್ತು. ಎಲ್ಲಾ ಮತದವರಲ್ಲಿ ಧರ್ಮವಿರಲಿ’ ಎಂದು ಅವರು ಹೇಳಿದರು

ಉತ್ಸವ ಸಮಿತಿ ಅಧ್ಯಕ್ಷ ಮಹಾಬಲ ಕುಳ ಅಧ್ಯಕ್ಷತೆ ವಹಿಸಿದ್ದರು. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ಗೋಪಾಲಕೃಷ್ಣ ಭಟ್ ,ಸಾರ್ವಜನಿಕ ಆರಾಧನಾ ಸಮಿತಿ ಗೌರವಾಧ್ಯಕ್ಷ ಟಿ.ಜಿ.ಮುಡೂರು,ಅಧ್ಯಕ್ಷ ಬಾಲಕೃಷ್ಣ ಗೌಡ ಕುದ್ವ, ಕಾರ್ಯದರ್ಶಿ ಸವಿತಾರ ಮುಡೂರು, ಉತ್ಸವ ಸಮಿತಿ ಕಾರ್ಯದರ್ಶಿ ವಿಶ್ವನಾಥ ಸಂಪ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉತ್ಸವಕ್ಕೆ ಸಂಗ್ರಹವಾದ ಮೊತ್ತದ ಉಳಿಕೆ ಹಣದಲ್ಲಿ ಕೊಡಗಿನ ನೆರೆ ಸಂತ್ರಸ್ತರಿಗಾಗಿ ಮುಖ್ಯಮಂತ್ರಿಗಳ ನಿಧಿಗೆ ರೂ.೧೦ಸಾವಿರವನ್ನು ನೀಡುವ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಮಹಾಬಲ ಕುಳ ಅವರು ಅಧ್ಯಕ್ಷತೆ ಭಾಷಣದಲ್ಲಿ ಹೇಳಿದರು.ಕಾರ‍್ಯಕ್ರಮದಲ್ಲಿ ಗೀತಾಸುಧಾ ತೋಟ ಪ್ರಾರ್ಥಿಸಿದರು.ಬಾಲಕೃಷ್ಣ ಗೌಡ ಕುದ್ವ ಸ್ವಾಗತಿಸಿದರು.ಸವಿತಾರ ಮುಡೂರು ಪ್ರಾಸ್ತಾವನೆಗೈದರು.ಪುನಿತ್ ಮೂಲೆಮನೆ ಅತಿಥಿಯನ್ನು ಸಭೆಗೆ ಪರಿಚಾಯಿಸಿದರು. ಚಿನ್ನಪ್ಪ ಸಂಕಡ್ಕ ಮತ್ತು ಧ್ರುವಕುಮಾರ್ ಕಂಬಳ ಬಹುಮಾನ ವಿಜೇತರ ಪಟ್ಟಿ ಓದಿದರು.

ತೀರ್ಥಾನಂದ ಕೊಡಂಕಿರಿ ನಿರೂಪಿಸಿದರು.ವಿಶ್ವನಾಥ ಸಂಪ ವಂದಿಸಿದರು.ಸಂಜೆ ಧೀಶಕ್ತಿ ಮಹಿಳಾ ಯಕ್ಷಬಳಗ ಇವರಿಂದ ಯಕ್ಷಗಾನ ತಾಳಮದ್ದಳೆ, ಸಭಾಕಾರ‍್ಯಕ್ರಮದ ಬಳಿಕ ರಾತ್ರಿ ಕೆ ಎಸ್ ಎಸ್ ಕಾಲೇಜಿನ ಸಂಸ್ಕೃತಿ ಸೌರಭ ಸಾಂಸ್ಕೃತಿಕ ತಂಡದವರಿಂದ ನೃತ್ಯ ವೈವಿಧ್ಯ ನಡೆಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.