ನಿರಾಶ್ರಿತರಿಗೆ ಬಂದ ಅಕ್ಕಿ ಕಾಂಗ್ರೆಸ್ ಕಾರ್ಯಕರ್ತರ ಮನೆಗಳಿಗೆ ಎಂಬ ಬಿಜೆಪಿ ಆರೋಪ ನಿರಾಧಾರ : ಪೆರಾಜೆ ವಲಯ ಕಾಂಗ್ರೆಸ್ ಸ್ಪಷ್ಟನೆ

Advt_Headding_Middle
Advt_Headding_Middle

ನಿರಾಶ್ರಿತರಿಗೆ ಬಂದ ಅಕ್ಕಿಯನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ವಿತರಿಸಲಾಗಿದೆ ಎಂದು ಬಿಜೆಪಿಯವರು ಪ್ರಚಾರ ಮಾಡುತ್ತಿರುವುದು ಕೀಳು ಮಟ್ಟದ ಕೃತ್ಯವಾಗಿದ್ದು, ಈ ಆರೋಪ ಸಂಪೂರ್ಣ ನಿರಾಧಾರ ಎಂದು ಪೆರಾಜೆ ವಲಯ ಕಾಂಗ್ರೆಸ್ ಸ್ಪಷ್ಟಪಡಿಸಿದೆ.


ಪೆರಾಜೆ ವಲಯ ಕಾಂಗ್ರೆಸ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಈ ಪ್ರಚಾರದ ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೆರುಮುಂಡರವರು, ಪ್ರಕೃತಿ ದುರಂತದ ನಿರಾಶ್ರಿತರಿಗೆಂದು ಕೆಪಿಸಿಸಿಯಿಂದ ಅಕ್ಕಿ ಬಂದಿದ್ದು, ಇದನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಸಮ್ಮುಖದಲ್ಲಿ ವಿತರಿಸಲಾಗಿದೆ. ಹಾಗೆ ಬಂದ ಅಕ್ಕಿಯ ಪೈಕಿ ಉಳಿದದ್ದು ಮಳೆಯ ಕಾರಣದಿಂದ ಹಾಳಾಗುವ ಸಂಭವವಿದ್ದುದರಿಂದ ಅದನ್ನು ಈ ಭಾಗದ ಬಡವರಿಗೆ ವಿತರಿಸಲಾಗಿದೆ. ಇದರಲ್ಲಿ ಏನೂ ತಪ್ಪು ಸಂಭವಿಸಿಲ್ಲ. ಆದರೂ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದರು. ನಾನು ಸಾರ್ವಜನಿಕ ಜೀವನದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡಿದವ. ಎಂದೂ ಇನ್ನೊಬ್ಬರ ಹಣಕ್ಕೆ ಕೈಚಾಚಿಲ್ಲ. ಸಾರ್ವಜನಿಕ ಹಣ ತಿನ್ನುವಂತಹ ಗತಿ ಬಂದಿಲ್ಲ. ದೇವರು ಮೆಚ್ಚದ ಕೆಲಸವನ್ನು ಎಂದೂ ಮಾಡಿಲ್ಲ ಎಂದು ಅವರು ಹೇಳಿದರು.

ಆರೋಪಗಳ ಕುರಿತು ಸ್ಪಷ್ಟನೆ ನೀಡಿದ ಸೂರಜ್ ಹೊಸೂರು, ಕೆಪಿಸಿಸಿಯಿಂದ ೫ ಟ್ರಕ್‌ಗಳಷ್ಟು ಅಕ್ಕಿ ಕೊಡಗಿಗೆ ಬಂದಿತ್ತು. ಅದನ್ನು ಬೇರೆ ಬೇರೆ ಬ್ಲಾಕ್‌ಗಳ ನಿರಾಶ್ರಿತರಿಗೆ ಹಂಚಲೆಂದು ವಿಂಗಡಿಸಲಾಗಿತ್ತು. ಇಲ್ಲಿ ಬಂದು ಮಿಕ್ಕಿದ ಅಕ್ಕಿಯನ್ನು ವಾಪಾಸ್ ಬೆಂಗಳೂರಿಗೆ ಕಳುಹಿಸುವುದು ಬೇಡವೆಂದು, ಅತಿವೃಷ್ಠಿಯಲ್ಲಿ ಭಾಗಿಕವಾಗಿ ಸಂತ್ರಸ್ತರಾದ ಹೊಳೆ ಬದಿ ವಾಸವಿರುವ ಬಡ ಕುಟುಂಬಗಳಿಗೆ ನೀಡಲಾಗಿದೆ. ಇದಕ್ಕೆಲ್ಲಾ ದಾಖಲೆಗಳಿದ್ದು, ಅತ್ಯಂತ ಪಾರದರ್ಶಕ ರೀತಿಯಲ್ಲಿ ವಿತರಿಸಲಾಗಿದೆ ಎಂದರು.

ಪ್ರಕೃತಿ ದುರಂತದ ಸಂದರ್ಭದಲ್ಲಿ ಪಕ್ಷ ಬೇಧ ಮರೆತು ಅಲ್ಲಿ ಕೆಲಸ ಕಾರ್ಯಗಳು ನಡೆದವು. ನಾವೆಲ್ಲಾ ಅಂದಿನಿಂದಲೇ ದಿನಂಪ್ರತಿ ಪರಿಹಾರ ಹಾಗೂ ಸೇವಾ ಕಾರ್ಯಕ್ಕ ಧುಮುಕಿದ್ದೇವೆ. ಈ ರೀತಿಯ ಸೇವೆ ಮಾಡಲು ಸಾಧ್ಯವಿಲ್ಲದವರು ಅಸೂಯೆಯಿಂದ ವಲಯ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕೆಲವು ಸ್ವಪಕ್ಷೀಯರೂ ಇದರ ಹಿಂದೆ ಇದ್ದು, ಈ ಕುರಿತು ಪಕ್ಷದ ಅಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆ. ಸಂಬಂಧಪಟ್ಟವರಿಗೆ ನೋಟೀಸ್ ಮಾಡಲಾಗಿದೆ ಎಂದು ಸೂರಜ್ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.