ಪೆರಾಜೆಯಲ್ಲಿ ತೆರೆದ ಬಾವಿ ಅನುದಾನದಲ್ಲಿ ಅವ್ಯವಹಾರ ನಡೆದಿಲ್ಲ, ಯಾವುದೇ ತನಿಖೆಗೆ ಸಿದ್ಧ – ಬಿಜೆಪಿ

Advt_Headding_Middle
Advt_Headding_Middle


ಪೆರಾಜೆಯಲ್ಲಿ ತೆರೆದ ಬಾವಿ ಅನುದಾನದಲ್ಲಿ ಬಿಜೆಪಿ ಆಡಳಿತದಿಂದ ಸ್ವಜನ ಪಕ್ಷಪಾತ ಮತ್ತು ಅವ್ಯವಹಾರ ನಡೆದಿದೆ ಎಂಬ ವಲಯ ಕಾಂಗ್ರೆಸ್ ಆರೋಪ ನಿರಾಧಾರವಾಗಿದ್ದು, ಈ ಕುರಿತು ಯಾವುದೇ ತನಿಖೆಗೆ ಸಿದ್ಧ ಎಂದು ಪೆರಾಜೆ ಬಿಜೆಪಿ ಸಮಿತಿ ಹೇಳಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಿತಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯವರು, ಈ ಕುರಿತಂತೆ ಜಿಲ್ಲಾಧಿಕಾರಿ ಅಥವಾ ಲೋಕಾಯುಕ್ತ ಅಥವಾ ಇನ್ನಾವುದೇ ವಿಶೇಷ ತನಿಖಾ ತಂಡಕ್ಕೆ ದೂರು ನೀಡಿದರೂ, ಅದರ ತನಿಖೆ ಎದುರಿಸಲು ನಾವು ಸದಾ ಸಿದ್ಧ, ಆ ಕೆಲಸ ತಕ್ಷಣ ಆಗಲಿ ಎಂದು ಸವಾಲು ಹಾಕಿದ್ದಾರೆ. ಈ ಆರೋಪಗಳಿಗೆ ಸ್ಪಷ್ಟ ದಾಖಲಾತಿ ಒದಗಿಸಿ ಕೊಡಲಿ. ತಪ್ಪಿದಲ್ಲಿ ಮುಂದಿನ ಶನಿವಾರದೊಳಗೆ ಪೆರಾಜೆ ದೇವಸ್ಥಾನದಲ್ಲಿ ಸುರೇಶ್ ಪೆರುಮುಂಡ ಮತ್ತು ಸ್ವಯಂ ಘೋಷಿತ ಸಹಕಾರಿ ಧುರೀಣ ಎನಿಸಿಕೊಂಡವರು ಪ್ರಮಾಣಕ್ಕೆ ಬರಲಿ ಎಂದು ಆಹ್ವಾನಿಸುತ್ತೇವೆ. ಪೆರುಮುಂಡ ಅಶೋಕ್‌ರವರು, ಪೆರುಮುಂಡ ಸುರೇಶ್ ಅವರ ಸಹೋದರನಾಗಿದ್ದು, ಇದು ತಾ.ಪಂ. ಸದಸ್ಯರ ಸ್ವಜನ ಪಕ್ಷಪಾತವಲ್ಲ. ಅಶೋಕ ಪೆರುಮುಂಡರವರ ಬಾವಿಗೆ ರಿಂಗ್ ಅಳವಡಿಸಲು ತಾ.ಪಂ.ನಿಂದ ಅನುದಾನ ಒದಗಿಸಿದ್ದು ಸರಿ. ಆದರೆ ಪಂ. ಸದಸ್ಯ ಉದಯಚಂದ್ರ ಕುಂಬಳಚೇರಿಯವರಿಗೆ ೨೦೧೩/೧೪ರ ಸಾಲಿನಲ್ಲಿ ಬಾವಿ ಮಂಜೂರಾದರೂ, ಬಾವಿ ತೆಗೆಯಲಿಲ್ಲ. ಅನುದಾನ ಪಡೆದಿರುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಚಾರದ ಬಗ್ಗೆ ವಲಯ ಅಧ್ಯಕ್ಷ ಸುರೇಶ್ ಪೆರುಮುಂಡರವರು ಅಪಪ್ರಚಾರ ಮಾಡುವುದು ಅವರ ಘನತೆಗೆ ಶೋಭೆಯಲ್ಲ. ಹಾಗೂ ಮಾಡದ ಉಳ್ಳಕುಲ ಬಳಿ ಒಂದು ಬಾವಿಯನ್ನು ಸುರೇಶ್ ಪೆರುಮುಂಡರವರು ತೆಗೆಸಿರುವುದಕ್ಕೆ, ದೇವಸ್ಥಾನದಲ್ಲಿ ಎಲ್ಲಿಯೂ ಕೂಡಾ ದಾಖಲಾತಿ ಇರುವುದಿಲ್ಲ. ಆದರೆ ಜಿಲ್ಲಾ ಪಂಚಾಯತ್ ವತಿಯಿಂದ ಬಾವಿ ತೆಗೆಸಿರುವುದಕ್ಕೆ ದಾಖಲಾತಿ ಇದ್ದು, ಅದಕ್ಕೆ ಸಂಬಂಧಿಸಿದ ಅನುದಾನವನ್ನು ದೇವಸ್ಥಾನದ ಆಡಳಿತ ಖಾತೆಗೆ ಗುತ್ತಿಗೆದಾರರು ಜಮಾ ಮಾಡಿರುವುದಕ್ಕೆ ದಾಖಲಾತಿ ಇದೆ.

ಪೆರಾಜೆ ಗ್ರಾ.ಪಂ. ಅಭಿವೃದ್ಧಿಗೆ ಈ ತನಕ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೆರುಮುಂಡರಾಗಲೀ, ಕಾಂಗ್ರೆಸ್ ಪಕ್ಷವಾಗಲೀ ಒಂದು ರೂಪಾಯಿ ಅನುದಾನ ತಂದ ಯಾವುದೇ ಇತಿಹಾಸ ಇಲ್ಲ. ಆದರೆ ಬಿಜೆಪಿಯವರು ನಿರಂತರ ಅನುದಾನ ತಂದು ಗ್ರಾಮದ ಪ್ರತಿ ಕುಟುಂಬದ ರಸ್ತೆ ಅಭಿವೃದ್ಧಿಯಾಗಿರುವುದಕ್ಕೆ ಪೆರಾಜೆ ಗ್ರಾಮವೇ ಸಾಕ್ಷಿ. ಈ ಹಿನ್ನಲೆಯಲ್ಲಿ ಪೆರಾಜೆ ಗ್ರಾಮಸ್ಥರು, ನಿರಂತರ ೩೦ ವರ್ಷಗಳಿಂದ ಬಿಜೆಪಿಗೆ ಆಡಳಿತ ಕೊಟ್ಟಿರುವುದೇ ಜೀವಂತ ಸಾಕ್ಷಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.