Breaking News

ನ್ಯಾಷನಲ್ ಕನ್ಸ್ಯೂಮರ್ ಫೇರ್‌ನಿಂದ ಪುತ್ತೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಮನರಂಜನಾ ಮೇಳ ಮತ್ತು ವಸ್ತು ಪ್ರದರ್ಶನ – ಸೆ. ೧೭ ರಿಂದ ಆರಂಭ

Advt_Headding_Middle
Advt_Headding_Middle

ಪುತ್ತೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಮೆಗಾ ಮನರಂಜನಾ ಮೇಳ ಮತ್ತು ವಸ್ತುಪ್ರದರ್ಶನ ಆಗಮಿಸಿದ್ದು, ಸೆ. 17 ರಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದ ಗದ್ದೆಯಲ್ಲಿ ಆರಂಭವಾಗಲಿದೆ.

 

ನ್ಯಾಷನಲ್ ಕನ್ಸ್ಯೂಮರ್ ಫೇರ್ 40 ವರ್ಷಗಳ ಇತಿಹಾಸ ಹೊಂದಿರುವ ಬೆಂಗಳೂರಿನ ಸಂಸ್ಥೆಯಾಗಿದ್ದು, ಭಾರತದಾದ್ಯಂತ ಸುಮಾರು 7೦೦ ಕಡೆಗಳಲ್ಲಿ ಮೇಳಗಳನ್ನು ಸಂಘಟಿಸಿದ್ದು, ಇದೀಗ ಪ್ರಥಮ ಬಾರಿಗೆ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಗದ್ದೆಯಲ್ಲಿ ಈ ಮೆಗಾ ಮೇಳವನ್ನು ಆಯೋಜಿಸಿದೆ. ನಾನಾ ಕಂಪೆನಿಗಳ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಮನರಂಜನಾ ಕ್ರೀಡೆಗಳು ಒಂದೇ ಸೂರಿನಡಿ ಲಭ್ಯವಾಗಲಿದೆ. ವಸ್ತುಗಳ ಗುಣಮಟ್ಟದಲ್ಲಿ ಕಂಪೆನಿ ಮತ್ತು ಗ್ರಾಹಕರು ನೇರಾನೇರ ವ್ಯವಹಾರಕ್ಕೆ ಉತ್ತೇಜನ ನೀಡುವಲ್ಲಿ ಈ ಮೇಳ ಸಹಕಾರಿಯಾಗಲಿದ್ದು, ವಿವಿಧ ಕಂಪೆನಿಗಳು ಈ ಸಂಸ್ಥೆಯೊಡನೆ ಸಹಯೋಗ ಹೊಂದಿದೆ. ಭಾರತದಾದ್ಯಂತ ನಾನಾ ರಾಜ್ಯಗಳಲ್ಲಿ ಸಂಚರಿಸಿ ಸುಮಾರು ೪೫ ದಿನಗಳ ಕಾಲ ಒಂದೇ ಪ್ರದೇಶದಲ್ಲಿ ಮೇಳ ಆಯೋಜಿಸಿ ಆಯಾ ಪ್ರದೇಶಗಳ ಗ್ರಾಹಕರಿಗೆ ವಿವಿಧ ಕಂಪೆನಿಗಳ ವಿವಿಧ ಉತ್ಪನ್ನಗಳನ್ನು ಪರಿಚಯಿಸುವುದೇ ಈ ಸಂಸ್ಥೆಯ ಕಾರ್ಯವೈಖರಿಯಾಗಿದೆ. ಪುತ್ತೂರಿನಲ್ಲಿ ಇಂತಹ ಮೇಳ ಮೊದಲ ಬಾರಿಗೆ ನಡೆಯುತ್ತಿದ್ದು, ಈಗಾಗಲೇ ‘ಪುತ್ತೂರು ಉತ್ಸವ’ ಭಾರೀ ಪ್ರಚಾರವನ್ನು ಪಡೆದಿದ್ದು, ಪ್ರತಿಯೋರ್ವರೂ ಮೇಳದ ಬಗ್ಗೆ ಕುತೂಹಲ ವ್ಯಕ್ತಪಡಿಸಲಾರಂಭಿಸಿದ್ದಾರೆ. ಭಾರೀ ಗಾತ್ರದ ಪ್ರಾಣಿಗಳ ಸ್ತಬ್ಧಚಿತ್ರದ ಹಾಗೂ 90 ಅಡಿ ಎತ್ತರದ ಐಪೆಲ್ ಟವರ್ ಈ ಮೇಳದ ಮತ್ತೊಂದು ವಿಶೇಷವಾಗಿದೆ.

ಗೃಹಬಳಕೆ ಉತ್ಪನ್ನಗಳು, ಪೀಠೋಪಕರಣಗಳು, ಅಡುಗೆ ಮನೆ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ಡ್ರೆಸ್ ಮೆಟೀರಿಯಲ್ಸ್, ಫ್ಯಾಶನ್ ಪಾದರಕ್ಷೆಗಳು, ಆಟಿಕೆಗಳು, ಸ್ಟೇಷನರಿ, ಆಹಾರೋತ್ಪನ್ನಗಳು ಸೇರಿದಂತೆ ಇನ್ನೂ ನೂರಾರು ಉತ್ಪನ್ನಗಳನ್ನು ಕಾಣುವ, ಖರೀದಿಸುವ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಇನ್ನು ಮನೋರಂಜನಾ ಕ್ರೀಡೆಗಳು, ಜಾಂಟ್‌ವ್ಹೀಲ್, ೩ಡಿ ಎಫೆಕ್ಟ್, ಅಕ್ವಾ, ಝಿಗ್ ಝ್ಯಾಗ್, ಕ್ಯಾಟರ್ ಪಿಲ್ಲರ್, ಬ್ರೇಕ್ ಡ್ಯಾನ್ಸ್, ಡ್ರ್ಯಾಗನ್ ಟ್ರೈನ್, ಕ್ಯಾರೀ ಹೌಸ್, ಮಕ್ಕಳ ಬೋಟಿಂಗ್, ಇತ್ಯಾದಿ ಕ್ರೀಡೆಗಳು ಮನರಂಜಿಸಲಿವೆ. ಪ್ರತಿದಿನ ಸಂಜೆ 3.3೦ ರಿಂದ ರಾತ್ರಿ 8.3೦ ರವರೆಗೆ ಈ ಮೇಳ ನಡೆಯಲಿದೆ.

1೦೦ಕ್ಕಿಂತ ಅಧಿಕ ಟ್ರಕ್ಕುಗಳಲ್ಲಿ ಈ ಮೇಳಕ್ಕೆ ಅಗತ್ಯವಿರುವ ಸಲಕರಣೆಗಳು ಬಂದು ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಸಕಲ ಸಿದ್ಧತೆಗಳು ನಡೆದಿದೆ. ಮಂಗಳೂರಿನಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ರಾಷ್ಟ್ರೀಯ ಗ್ರಾಹಕರ ಮೇಳ ೞ ಎಂಬ ಹೆಸರಿನಲ್ಲಿ ಈ ಸಂಸ್ಥೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಅದೇ ರೀತಿ ಉಡುಪಿಯಲ್ಲಿ ಕಳೆದ ಹದಿನೈದು ವರ್ಷಗಳಿಂದ ೞಉಡುಪಿ ಉತ್ಸವ ೞ ಎಂಬ ಹೆಸರಿನಲ್ಲಿ ಸಂಸ್ಥೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದೀಗ ಪ್ರಸ್ತುತ ವರ್ಷ ಈ ಭಾಗದ ಜನರ ಬೇಡಿಕೆಗನುಸಾರವಾಗಿ ಸಂಸ್ಥೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ೞಪುತ್ತೂರು ಉತ್ಸವ ೞ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.

9೦ ಅಡಿ ಎತ್ತರದ ಐಪೆಲ್ ಟವರ್..: ಪುತ್ತೂರಿನಲ್ಲಿ ನ್ಯಾಷನಲ್ ಕನ್ಸ್ಯೂಮರ್ ಫೇರ್ ಆಯೋಜಿಸಿರುವ ಪುತ್ತೂರು ಉತ್ಸವದಲ್ಲಿ ೯೦ ಅಡಿ ಎತ್ತರದ ಐಪೆಲ್ ಟವರ್ ವಿಶೇಷವಾಗಿದೆ. ರಾತ್ರಿ ವೇಳೆ ವಿದ್ಯುತ್ ದೀಪಾಲಂಕೃತವಾಗಿ ಕಂಗೊಳಿಸುವ ಈ ಟವರ್ ಮುಂಭಾಗದಲ್ಲಿ ನಿಂತು ಫೊಟೋ ತೆಗೆಯಲು ಅವಕಾಶವಿದ್ದು ಇದು ಸೆಲ್ಫಿ ಪ್ರಿಯರಿಗೆ ಸಂತಸದ ವಿಚಾರವಾಗಿದೆ.

ಪ್ರಾಣಿಪ್ರಿಯರಿಗಿದೆ ಎನಿಮಲ್ ಕಿಂಗ್ಡಮ್….: ಪ್ರಪಂಚದ ವಿವಿಧ ದೇಶಗಳಲ್ಲಿ ಕಾಣಸಿಗುವ ಪ್ರಾಣಿಗಳನ್ನು ಹೋಲುವ ಯಾಂತ್ರೀಕೃತ ಮೃಗಗಳು ಇಲ್ಲಿದೆ. ಆನೆ, ಜೀಬ್ರಾ, ಪಾಂಡಾ, ಖಡ್ಗಾಮೃಗ, ಹುಲಿ, ನೀರಾನೆ, ಕಿಂಗ್‌ಕಾಂಗ್ ಹೀಗೆ ಹಲವಾರು ಬಗೆಯ ಪ್ರಾಣಿಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ.

ಕಂಪೆನಿ ಬಗ್ಗೆ
ಎ.ಕೆ. ನಾಯರ್‌ರವರಿಂದ ೧೯೮೪ ರಲ್ಲಿ ಸ್ಥಾಪನೆಯಾದ ಎನ್‌ಸಿಎಫ್ ಕಂಪೆನಿಯಲ್ಲಿ ಗೌತಮ್‌ರವರು ಪ್ರಸ್ತುತ ಆಡಳಿತ ನಿರ್ದೇಶಕರಾಗಿದ್ದಾರೆ ಸಂಸ್ಥೆಯು ಪ್ರಸ್ತುತ ಎರಡು ಮೇಳಗಳನ್ನು ಹೊಂದಿದ್ದು ಮಂಗಳೂರಿನಲ್ಲಿ ಕರಾವಳಿ ಮೈದಾನದಲ್ಲಿ ಇದೀಗಾಗಲೇ ಒಂದು ತಂಡ ಕಾರ್ಯಾಚರಿಸುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.