Breaking News

ಮುರುಳ್ಯ ಹಾಲು ಉತ್ಪಾದಕರ ವಾರ್ಷಿಕ ಸಭೆ, ನಿವ್ವಳ ಲಾಭ – 1184726.75 ಪೈಸೆ ಮೂವರಿಗೆ ಸನ್ಮಾನ

Advt_Headding_Middle
Advt_Headding_Middle

ಮುರುಳ್ಯ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಅಲೆಕ್ಕಾಡಿ ಇದರ ವಾರ್ಷಿಕ ಸಭೆಯು ಸಂಘದ ಅಧ್ಯಕ್ಷ ಜಗನ್ನಾಥ ಮುಕ್ಕೂರುರವರ ಅಧ್ಯಕ್ಷತೆಯಲ್ಲಿ ಸೆ.೧೬ರಂದು ಸಂಘದ ವಠಾರದಲ್ಲಿ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಅಲೆಕ್ಕಾಡಿ ಸೊಸೈಟಿ ಅಧ್ಯಕ್ಷ ಎಚ್. ವಸಂತ ದೀಪ ಬೆಳಗಿಸಿ ಕಾರ‍್ಯಕ್ರಮ ಉದ್ಘಾಟಿಸಿದರು. ಸಂಘದ ಕಾರ್ಯದರ್ಶಿ ಅಕ್ಷತಾ ಎ. ವರದಿ ವಾಚಿಸಿದರು. ನಿರ್ದೇಶಕರಾದ ರಾಘವ ಗೌಡ ಪಲ್ಲತಡ್ಕ, ಸುಜಿತ್ ರೈ ಕೆ.ಎನ್., ಶ್ರೀಮತಿ ಕುಸುಮಾವತಿ ಬಿ.ಆಳ್ವ, ಶ್ರೀಮತಿ ಶೀಲಾವತಿ ರೈ ಕುಕ್ಕುತ್ತಡಿ, ಜನಾರ್ಧನ ಪೂಜಾರಿ, ಸುದೇಶ್ ರೈ ಅಲೆಕ್ಕಾಡಿ, ಚೋಮ ಎಣ್ಮೂರು, ಮಂಗಳೂರು ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಹರೀಶ್‌ಕುಮಾರ್ ವೇದಿಕೆಯಲ್ಲಿದ್ದರು.

ಗುಣಮಟ್ಟದ ಹಾಲು ಹಾಕುವುದು ಮತ್ತು ನಿರಂತರ ಹಾಲು ಹಾಕುವುದು ಮತ್ತು ಸ್ಥಾಪಕ ಹೈನುಗಾರಿಕಾ ಸದಸ್ಯರಾಗಿ ಹಾಲು ಹಾಕುವುದು, ಹೀಗೆ ಮೂರು ಮಹಿಳಾ ಸದಸ್ಯರಾದ ಬೇಬಿ ಪೂಜಾರ‍್ತಿ ನೂಜಾಡಿ, ಶ್ರೀಮತಿ ವಾಸಮ್ಮ ರೈ ಕುಕ್ಕುತ್ತಡಿ, ಶ್ರೀಮತಿ ಭವ್ಯ ಸಂಕ್ರಾತಿಮೂಲೆಯವರನ್ನು ಸಂಘದ ವತಿಯಿಂದ ಗುರುತಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ದೀಕ್ಷಿತ ತಂಡ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ರಮಾನಂದ ರೈ ಸ್ವಾಗತಿಸಿದರು. ನಿರ್ದೇಶಕ ಜನಾರ್ಧನ ಅಲೆಕ್ಕಾಡಿ ವಂದಿಸಿದರು. ನಿರ್ದೇಶಕ ಸುಜಿತ್ ರೈ ನಿರೂಪಿಸಿದರು.ಸಿಬ್ಬಂದಿಗಳಾದ ಸುಂದರ ಆಲಾಜೆ, ಲಕ್ಷ್ಮೀಶ ಕೆ., ಶ್ರೀಮತಿ ಶೀಲಾವತಿ, ವಿಶ್ವನಾಥ ಕಾರ್ಯಕ್ರಮದಲ್ಲಿ ಸಹಕರಿಸಿದರು.
ಹೈನುಗಾರ ಸದಸ್ಯರಿಗೆ ಪ್ರಥಮವಾಗಿ ಉದಯಕುಮಾರ್ ರಾಮ್‌ದೇವ್, ದ್ವಿತೀಯ ಜಗನ್ನಾಥ ಪೂಜಾರಿ ಮುಕ್ಕೂರು, ತೃತೀಯ ಸೂರಪ್ಪ ಗೌಡ ಮತ್ತು ನಾಗರಾಜ ರಾವ್ ಆಲಾಜೆ ಹಾಗೂ ಎಲ್ಲಾ ಸದಸ್ಯರಿಗೆ ಸಮಾಧಾನಕರ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.