ಗುತ್ತಿಗಾರು: ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಉದ್ಘಾಟನೆ- ವಿದ್ಯಾರ್ಥಿಗಳು ಶಿಕ್ಷಣ ಜೊತೆ ಕ್ರೀಡಾ ಕ್ಷೇತ್ರವನ್ನು ಕೂಡ ಹೆಚ್ಚು ತೊಡಗಿಸಿಕೊಳ್ಳಬೇಕು: ಶಾಸಕ ಅಂಗಾರ

Advt_Headding_Middle
Advt_Headding_Middle

ಸುಳ್ಯದ ಶಾಸಕ ಎಸ್.ಅಂಗಾರ ಕ್ರೀಡಾಕೂಟವನ್ನು ಉದ್ಘಾಟಿಸಿ, ಮಾತನಾಡಿ ವಿದ್ಯಾರ್ಥಿಗಳು ಭಾಗವಹಿಸುವುದು ಮುಖ್ಯ, ಫಲಿತಾಂಶವಲ್ಲ, ದೇಶದಲ್ಲಿ ಫಲಿತಾಂಶ ಬಂದಾಗ ಹೆಚ್ಚು ಪ್ರಚಾರ ಬರುವುದು ಕ್ರೀಡಾ ಕ್ಷೇತ್ರದಲ್ಲಿ ಮಾತ್ರ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕೆಂದು ಸುಳ್ಯ ಶಾಸಕ ಅಂಗಾರರವರು ಹೇಳಿದರು. ಆವರು ಸೆ.೧೭ರಂದು ಜಿಲ್ಲಾ ಮಟ್ಟದ ದ.ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು, ಕ್ಷೇತ್ರ ಶೀಕ್ಷಣಾಧಿಕಾರಿ ಸುಳ್ಯ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟದ ಉದ್ಘಾಟಿಸಿ ಮಾತನಾಡಿದರು. ಸಭಾಧ್ಯಕ್ಷತೆಯನ್ನು ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷ ಅಚ್ಚುತ್ತ ಗುತ್ತಿಗಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ತಾ.ಪಂ. ಸದಸ್ಯೆ ಯಶೋದ ಬಾಳೆಗುಡ್ಡೆ, ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ ಶಿವರಾಮಯ್ಯ, ದೈ. ಶಿ. ಆಧೀಕ್ಷಕ ರಘುನಾಥ, ಶಿಕ್ಷಣ ಸಮನ್ವಯಧಿಕಾರಿ ವೀಣಾ, ಆರ್ಥಿಕ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಸ್ವಾಗತ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ದೈ.ಶಿ. ಪರಿವೀಕ್ಷಕ ಲಕ್ಷ್ಮೀಶ ರೈ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಂಞನಮನೆ ಮಂಜುನಾಥ, ಶಾಲಾ ಎಸ್.ಡಿ.ಎಮ್.ಸಿ. ಕಾರ್ಯಾಧ್ಯಕ್ಷ ಲೋಕೇಶ್ವರ ಡಿ.ಆರ್. ದೈ.ಶಿಕ್ಷಕ ಸಂಘದ ಅಧ್ಯಕ್ಷೆ ವನಿತಾ, ಜಿಲ್ಲಾ ದೈ.ಶಿ. ಸಂ. ಉಪಾಧ್ಯಕ್ಷ ಯೋಗೀಶ್ ಚಿದ್ಗಾಲ್, ಪ್ರೌಢಶಾಲಾ ಶಿಕ್ಷಕರ ಸಂಘದ ಸುರೇಶ್ , ಪ್ರಾ.ಶಾಲೆ. ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ, ಕಾಲೇಜು ಪ್ರಾಂಶುಪಾಲೆ ಚೆನ್ನಮ್ಮ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ಕೆಂಬಾರೆ, ಗುತ್ತಿಗಾರು ಗ್ರಾ.ಪಂ. ಸದಸ್ಯೆ ಶ್ರೀಮತಿ ಶ್ರೀದೇವಿ ಕೊಂಬುಟ್ಟು, ಭಾಗೀರಥಿ ಕಾಜಿಮಡ್ಕ ಮೊದಲಾದವರು ಉಪಸ್ಥಿತರಿದ್ದರು.
ನಾಲ್ಕು ಅಂಗಣದಲ್ಲಿ ಪಂದ್ಯಾಟವನ್ನು ಅತಿಥಿಗಳು ತೆಂಗಿನಕಾಯಿ ಒಡೆಯುವದರ ಮೂಲಕ ಹಾಗೂ ವಾಲಿಬಾಲ್ ಚಿಮ್ಮಿಸುವುದರ ಮೂಲಕ ಉದ್ಘಾಟಿಸಿದರು. ವಿವಿಧ ಕಡೆಯಿಂದ ಬಂದ ಪ್ರೌಢಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಯಶ್ವಿಸಿಗೆ ನಿರ್ಣಯಕರು, ತೀರ್ಪುಗಾರರು ಹಾಗೂ ಊರಿನ ಸಂಘ ಸಂಸ್ಥೆಗಳಾದ ಆದರ್ಶ ಯೂತ್ ಕ್ಲಬ್ ಹಾಲೆಮಜಲು, ನೇಸರ ಕಲಾ ಸಂಘ ಮೆಟ್ಟಿನಡ್ಕ, ಗ್ರಾ.ಪಂ. ಗುತ್ತಿಗಾರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಲಯನ್ಸ್ ಕ್ಲಬ್ ಗುತ್ತಿಗಾರು, ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರ, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಸೇರಿದಂತೆ ಸಹಕರಿಸಿದರು.ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಸ್ವಾಗತಿಸಿದರು, ದೈ.ಶಿ.ಶಿಕ್ಷಣ ನಾಗರಾಜ ವಂದಿಸಿದರು. ಶಿಕ್ಷಕ ನೆಲ್ಸ್‌ನ್ ಕೆಸ್ಟ್ಲೀನೋ ಹಾಗೂ ಚೈತ್ರ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.