ದುಬೈನಲ್ಲಿ ವಿಶ್ವ ತುಳು ಸಮ್ಮೇಳನಕ್ಕೆ ಗೌರವ ಭಾಷಣಗಾರರಾಗಿ ಡಾ. ಬೀಜದಕಟ್ಟೆಯವರು ಆಯ್ಕೆ

Advt_Headding_Middle
Advt_Headding_Middle

ನವೆಂಬರ್ ೨೦೧೮ ರಲ್ಲಿ ದುಬೈನಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನಕ್ಕೆ ಗೌರವ ಭಾಷಣಗಾರರಾಗಿ ಡಾ. ಬೀಜದಕಟ್ಟೆಯವರು ಆಯ್ಕೆಯಾಗಿದ್ದಾರೆ.


ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ವಿಶ್ವದ ಸಮಸ್ಥ ತುಳುವರ ಬೃಹತ್ ಸಮಾವೇಶ ಆಯೋಜಿಸಿದ್ದು, ೨೦೧೮ ನವೆಂಬರ್ ೨೩ ಶುಕ್ರವಾರ ಮತ್ತು ೨೪ ಶನಿವಾರ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣ, ದುಬಾಯಿಯಲ್ಲಿ ನಡೆಯಲಿದೆ.

ಸಾಗರೋತ್ತರ ತುಳುವರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲಭಾರತ ತುಳು ಒಕ್ಕೂಟ ಇವರುಗಳ ಸಹಯೋಗದೊಂದಿಗೆ ನಡೆಯುವ ವಿಶ್ವ ತುಳು ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ಪದ್ಮ ವಿಭೂಷಣ ಪುರಸ್ಕೃತ ಪರಮ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಆಗಮಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷರಾಗಿ ಅಬುಧಾಬಿ ಎನ್.ಎಂ.ಸಿ. ಸಮೂಹ ಸಂಸ್ಥೆಯ ಸ್ಥಾಪಕರು ಮತ್ತು ಚೇರ್ಮನ್ ಪದ್ಮಶ್ರೀ ಪುರಸ್ಕೃತ ಡಾ.ಬಿ.ಆರ್. ಶೆಟ್ಟಿಯವರು ಪಾಲ್ಗೊಳ್ಳಲಿದ್ದಾರೆ. ಗೌರವ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ವಂದನೀಯ ಧರ್ಮಾಧ್ಯಕ್ಷರು ಮತ್ತು ಮುಸ್ಲಿಂ ಪ್ರವಚನಕಾರರು ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಕರ್ನಾಟಕದಿಂದ ಗಣ್ಯರು ಹಾಗೂ ಗಲ್ಫ್ , ಅಮೇರಿಕಾ, ಆಸ್ಟ್ರೇಲಿಯಾ, ಯು.ಕೆ.ತುಳು ಸಂಘಟನೆಗಳ ಅಧ್ಯಕ್ಷರುಗಳು ಆಗಮಿಸಲಿದ್ದಾರೆ.

ಹೊರನಾಡ ತುಳು ಸಂಘಟನೆಗಳಾದ ಮುಂಬೈ , ದೆಹಲಿ, ಬರೋಡ, ನಾಸಿಕ್, ಸಾಂಗ್ಲಿ , ಪುಣೆ, ಚೆನೈ , ಹುಬ್ಬಳ್ಳಿ ,ಧಾರವಾಡ, ಬೆಳಗಾಂ ಇತ್ಯಾದಿ ಹಲವಾರು ಸಂಘಟನೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

ಗಲ್ಫ್ ರಾಷ್ಟ್ರಗಳಾದ ಮಸ್ಕತ್, ಬಹರೈನ್, ಕತ್ತಾರ್, ಕುವೈತ್,ಸೌದಿ ಅರೇಬಿಯಾ, ಒಮಾನ್ ಮತ್ತು ಯು.ಎ.ಇ.ಯ ಎಲ್ಲಾ ಕರ್ನಾಟಕ ಪರ ಸಂಘಟನೆಗಳು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ತುಳುವರು ಭಾಗವಹಿಸಲಿದ್ದಾರೆ.

ತಾಳ ಮದ್ದಳೆ, ಯಕ್ಷಗಾನ ನಾಟ್ಯ ವೈಭವ, ತುಳು ರಸ ಮಂಜರಿ, ತುಳು ಸಾಹಿತ್ಯ ಗೋಷ್ಠಿ ಮತ್ತು ವಿವಿಧ ಗೋಷ್ಠಿಗಳಲ್ಲಿ ತುಳುನಾಡಿನಿಂದ ಹಲವಾರು ಸಾಹಿತಿಗಳು ವಿದ್ವಾಂಸರು ಕಲಾವಿದರು ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.