ಗುರುಂಪು ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ – ಸುಟ್ಟು ಕರಕಲಾದ ಗೃಹಪಯೋಗಿ ವಸ್ತುಗಳು

Advt_Headding_Middle
Advt_Headding_Middle

ಸುಳ್ಯ ಗಾಂಧಿನಗರದಿಂದ ಆಲೆಟ್ಟಿ ಕಡೆಗೆ ಸಂಚರಿಸುವ ರಸ್ತೆ ಮಧ್ಯೆ ಗುರುಂಪು ಎಂಬಲ್ಲಿ ಇಬ್ರಾಹಿಂ ಸಂಪಾಜೆ ಎಂಬವರ ಕಟ್ಟಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಯೂನಿಸ್ ಎಂಬವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಸಂಭವಿಸಿದ ಘಟನೆ ಇಂದು ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಗ್ರೈಂಡರ್ ಚಾಲನೆಯಲ್ಲಿದ್ದ ಸಂದರ್ಭ ವಿದ್ಯುತ್ ಶಾರ್ಟ್ಸ್ ಸಂಭವಿಸಿದ್ದು, ಮನೆ ತುಂಬಾ ಹೊಗೆ ಕಾಣಿಸಿಕೊಂಡಿತು. ಈ ವೇಳೆ ಪಕ್ಕದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದವರು ತಕ್ಷಣ ಮನೆಯವರು ಆ ಮನೆಯವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ಸ್ಥಳೀಯರು ಕೂಡಲೇ ಆಗಮಿಸಿದ್ದು, ಸುಳ್ಯ ಅಗ್ನಿಶಾಮಕ ದಳದವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಲಾಯಿತು. ತಕ್ಷಣ ಆಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಸಫಲರಾದರು. 

ಈ ವೇಳೆಗಾಗಲೇ ಮನೆಯೊಳಗಿದ್ದ, ಗ್ರೈಂಡರ್, ಮಿಕ್ಸಿ, ಷಿಂಗ್ ಮೆಷಿನ್, ಮೊಬೈಲ್ ಮುಂತಾದ ವಸ್ತುಗಳು ಸುಟ್ಟು ಕರಕಲಾಗಿದ್ದವು. ಸುಮಾರು 5೦,೦೦೦ದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.