ಪೊಳೆಂಜ : ಯುವಶಕ್ತಿ ಗೆಳೆಯರ ಬಳಗದ ಮಹಾಸಭೆ

Advt_Headding_Middle
Advt_Headding_Middle

ಯುವಶಕ್ತಿ ಗೆಳೆಯರ ಬಳಗ ಪೊಳೆಂಜ ಪಂಜ ಇದರ ಮಹಾಸಭೆಯು ಸೆ. 19ರಂದು ಸ.ಕಿ.ಪ್ರಾ.ಶಾಲೆ ಪಾಂಡಿಗದ್ದೆ ಶಾಲಾ ವಠಾರದಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪದ್ಮನಾಭ ಬೊಳ್ಳಾಜೆ ನಿವೃತ್ತ ಸೈನಿಕರು ವಹಿಸಿದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಲೆಕ್ಕಾಚಾರ ವನ್ನು ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ಸಭೆಯಲ್ಲಿ ಮಂಡಿಸಿದರು. 2018-19 ನೆಯ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ರಾಮಚಂದ್ರ ಕೆರೆಮೂಲೆ, ಉಪಾಧ್ಯಕ್ಷರಾಗಿ ಕಿರಣ ಕಂರ್ಬು ನೆಕ್ಕಿಲ, ಪ್ರಧಾನ ಕಾರ್ಯದರ್ಶಿಯಾಗಿ ವಾಚಣ್ಣ ಕೆರೆಮೂಲೆ, ಜೊತೆ ಕಾರ್ಯದರ್ಶಿಯಾಗಿ ಭರತ್ ಕೊಟ್ರಂಜ, ಖಜಾಂಜಿಯಾಗಿ ಅಜಯ್ ಕಂರ್ಬು ಇವರನ್ನು ಆಯ್ಕೆ ಮಾಡಲಾಯಿತು.

ಆಡಳಿತ ಮಂಡಳಿಯ ಸದಸ್ಯರಾಗಿ ತಿಮ್ಮಪ್ಪ ಪೂಜಾರಿಮನೆ, ಹೊನ್ನಪ್ಪ ಬೊಳ್ಳಾಜೆ, ಕೇಶವ ಕೆರೆಮೂಲೆ, ಷಣ್ಮುಖ ಪಾಂಡಿಗದ್ದೆ, ದೀಪಕ್ ಪೂಜಾರಿಮನೆ, ಸತೀಶ್ ಬೊಳ್ಳಾಜೆ, ನೂತನ್ ಚಳ್ಳಕೋಡಿ,ಬಾಲಕೃಷ್ಣ ಬೊಳ್ಳಾಜೆ, ಗಣೇಶ್ ಮೂವಮೂಲೆ, ಯತೀನ್ ಕಂರ್ಬು,ಗೌತಮ್ ಬೊಳ್ಳಾಜೆ ಮತ್ತು ವಸಂತ್ ಕುಮಾರ್ ಕಂರ್ಬುನೆಕ್ಕಿಲ.ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಮೋನಪ್ಪ ಗೌಡ ಬೊಳ್ಳಾಜೆ, ವೆಂಕಟೇಶ್ ಕಂರ್ಬು,ರೋಹಿತ್ ಕೊಟ್ರಂಜ,ಮಾಧವ ಕೆರೆಮೂಲೆ, ಚಿನ್ಮಯ ಕಾಣಿಕೆ, ಗೌರವಾಧ್ಯಕ್ಷರಾಗಿ ಪದ್ಮನಾಭ ಬೊಳ್ಳಾಜೆ ನಿವೃತ್ತ ಸೈನಿಕರು ಇವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ವಾಚಣ್ಣ ಕೆರೆಮೂಲೆ ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.