ಜೀವಕ್ಕೆ ಬೆಲೆಯಿದೆ, ಅದನ್ನರಿತು ವಾಹನ ಚಾಲನೆ ಮಾಡಿ – ಶ್ರೀಧರ್ ಎಂ. ಕೆ.

Advt_Headding_Middle
Advt_Headding_Middle

ಬದುಕು ಅಮೂಲ್ಯ, ಪ್ರತಿಯೊಂದು ಜೀವಕ್ಕೂ ಬೆಲೆಯಿದೆ, ಅದನ್ನರಿತು ವಾಹನ ಚಾಲನೆ ಮಾಡಿದರೆ ಅವಘಡಗಳು ಸಂಭವಿಸುವುದಿಲ್ಲ. ಎಲ್ಲಾ ವಿಚಾರಗಳಿಗೂ ಅದರದ್ದೇ ಆದ ಕಾನೂನು ಇದೆ, ಅದನ್ನು ಪಾಲಿಸಿದಾಗ ಯಾವುದೇ ತಪ್ಪುಗಳು ಘಟಿಸುವ ಪ್ರಮಾಣ ಕಡಿಮೆಯಾಗುತ್ತದೆ ಎಂದು ಕೆವಿಜಿ ಪಾಲಿಟೆಕ್ನಿಕ್‌ನ ಆಯ್ಕೆ ಶ್ರೇಣಿ ಉಪನ್ಯಾಸಕ ಶ್ರೀಧರ್ ಎಂ ಕೆ ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕವು ರಸ್ತೆ ಸುರಕ್ಷತಾ ಮಾಹಿತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ Safety First….Avoid Worst” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಅಪಘಾತ ಸಂಭವಿಸಿದಾಗ ವೀಡಿಯೋ ಚಿತ್ರೀಕರಣ ಮಾಡದೇ ಜೀವ ಉಳಿಸುವ ಮೂಲಕ ಮಾನವೀಯತೆ ಮೆರೆಯಿರಿ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತುಂಬಾ ಬಳಲುವವರು ಪೋಷಕರು, ಅದನ್ನು ಗಮನದಲ್ಲಿಟ್ಟುಕೊಂಡು ವಾಹನ ಚಾಲನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಕಛೇರಿ ಅಧೀಕ್ಷಕಿ ನಿವೇದಿತಾ ಎಂ ಮಾತನಾಡಿ, ಇಂದಿನ ಯುವ ಜನತೆ ಮುಂದಿನ ಪ್ರಜೆಗಳು, ಈ ವಯಸ್ಸಿನಲ್ಲಿ ಇಂತಹ ಮಾಹಿತಿಗಳ ಅಗತ್ಯ ಬಹಳಷ್ಟು ಅಗತ್ಯ ಇದೆ, ಇಲ್ಲಿ ಸಿಕ್ಕಂತಹ ಮಾಹಿತಿಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಕನ್ನಡ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ ಯಾರೂ ಯಾವತ್ತೂ ಪರಿಪೂರ್ಣರಲ್ಲ, ದಿನೇ ದಿನೇ ತಿಳಿಯುವ ವಿಚಾರಗಳು ಬೇಕಾದಷ್ಟಿವೆ, ವಾಹನ ಚಾಲನೆಯ ಸಂದರ್ಭದಲ್ಲಿ ತಿಳಿಯಬೇಕಾದ ಹಾಗೂ ಪಾಲಿಸಬೇಕಾದ ನಿಯಮಗಳು ಹಲವು. ಅದನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ ಎಂದರು.
ತನ್ಮಯಿ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಧನ್ಯಶ್ರೀ ಸ್ವಾಗತಿಸಿ ಪ್ರಜ್ಞಾಶ್ರೀದೇವಿ ವಂದಿಸಿದರು. ಯೋಗಿತಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.