ರೋಟರಿ ಪ.ಪೂ.ಕಾಲೇಜು ಮಿತ್ತಡ್ಕ- ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Advt_Headding_Middle
Advt_Headding_Middle

ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ ಮತ್ತು ರೋಟರಿ ಪದವಿ ಪೂರ್ವ ಕಾಲೇಜು ಮಿತ್ತಡ್ಕ ಸುಳ್ಯ ಇವರ ಜಂಟಿ ಆಶ್ರಯದಲ್ಲಿ ೨೦೧೮-೧೯ನೇ ಸಾಲಿನ ತಾಲೂಕು ಮಟ್ಟದ ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯು ರೋಟರಿ ಪದವಿಪೂರ್ವ ಕಾಲೇಜು ಮಿತ್ತಡ್ಕ ಸುಳ್ಯದಲ್ಲಿ ಸೆ. ೧೯ರಂದು ನಡೆಯಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರೋ| ದಯಾನಂದ ಆಳ್ವ ಎಸ್, ಅಧ್ಯಕ್ಷರು ರೋಟರಿ ಚಾರಿಟೇಬಲ್ ಟ್ರಸ್ಟ್ (ರಿ) ಸುಳ್ಯ ಇವರು ವಹಿಸಿದ್ದರು. ಕಾರ್ಯಕ್ರಮವನ್ನು ರೋ| ಜಿತೇಂದ್ರ ಎನ್ ಎ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪಂದ್ಯಾಟದ ಅಂಕಣವನ್ನು ದ.ಕ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಜಯಪ್ರಕಾಶ್ ರೈ ಉದ್ಘಾಟಿಸಿದರು. ವೇದಿಕೆಯಲ್ಲಿ ರೋ| ಲತಾ ಮಧುಸೂಧನ್, ರೋ| ಪಿಪಿ ಪಿಎಚ್‌ಎಫ್ ಗಣೇಶ್ ಶರ್ಮಾ, ರೋ| ಟಿ.ಎಂ ಖಾಲಿದ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಜಯಲಕ್ಷ್ಮೀ ಕೆ ವಿ, ಪ್ರಾಥಮಿಕ ಶಾಲಾ ಮುಖ್ಯಗುರು ಅಚ್ಚುತ ಅಟ್ಲೂರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಬೊಮ್ಮೆಟ್ಟಿ ಸ್ವಾಗತಿಸಿ, ಅರ್ಥಶಾಸ್ತ್ರದ ಉಪನ್ಯಾಸಕಿಯಾದ ಶ್ರೀಮತಿ ಸವಿತಾ ಕುಮಾರಿ ವಂದಿಸಿದರು. ಎಲ್ಲ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿಶ್ವಾಸ್ ದೀಪಕ್ ಮತ್ತು ಪ್ರತೀಕ್ಷಾ ಕೆ.ಬಿ. ಕಾರ್ಯಕ್ರಮ ನಿರೂಪಿಸಿದರು.


ಬಹುಮಾನದ ವಿವರ
ಬಾಲಕರ ವಿಭಾಗ : ಪ್ರಥಮ : ರೋಟರಿ ಪ.ಪೂ.ಕಾಲೇಜು ಮಿತ್ತಡ್ಕ ಸುಳ್ಯ, ದ್ವಿತೀಯ : ಎನ್.ಎಮ್.ಪಿ.ಯು ಕಾಲೇಜು ಅರಂತೋಡು, ಉತ್ತಮ ಹೊಡೆತಗಾರ : ನೌಶಾದ್ ಎನ್.ಎಮ್.ಪಿ.ಯು ಕಾಲೇಜು ಅರಂತೋಡು, ಉತ್ತಮ ಪಾಸರ್ : ಬ್ರಿಜೇಶ್ ರೋಟರಿ ಪ.ಪೂ.ಕಾಲೇಜು ಮಿತ್ತಡ್ಕ ಸುಳ್ಯ, ಸರ್ವಾಂಗಿಣ ಆಟಗಾರ : ಹೃತಿಕ್ ಗೋರಡ್ಕ ರೋಟರಿ ಪ.ಪೂ.ಕಾಲೇಜು ಮಿತ್ತಡ್ಕ ಸುಳ್ಯ
ಬಾಲಕಿಯರ ವಿಭಾಗ : ಪ್ರಥಮ : ಶಾರದಾ ಮಹಿಳಾ ಪ.ಪೂ.ಕಾಲೇಜು ಸುಳ್ಯ, ದ್ವಿತೀಯ : ಎನ್.ಎಮ್.ಪಿ.ಯು ಕಾಲೇಜು ಅರಂತೋಡು, ಉತ್ತಮ ಹೊಡೆತಗಾರ : ಉಶಾ – ಎನ್.ಎಮ್.ಪಿ.ಯು ಕಾಲೇಜು ಅರಂತೋಡು, ಉತ್ತಮ ಪಾಸರ್ : ಸರಿತಾ – ಶಾರದಾ ಮಹಿಳಾ ಪ.ಪೂ.ಕಾಲೇಜು ಸುಳ್ಯ, ಸರ್ವಾಂಗಿಣ ಆಟಗಾರ : ತೌಫಿಕಾ – ಶಾರದಾ ಮಹಿಳಾ ಪ.ಪೂ.ಕಾಲೇಜು ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.