ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 24ನೇ ವಾರ್ಷಿಕ ಮಹಾಸಭೆ ಸೆ. 16ರಂದು ಸ೦ಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈಯವರ ಅಧ್ಯಕ್ಷತೆಯಲ್ಲಿ ಮ೦ಗಳೂರಿನ ಉರ್ವ ಸೆ೦ಟನರಿ ಚರ್ಚ್ ಹಾಲ್‌ನಲ್ಲಿ ಜರಗಿತು.


ಸಂಘವು ಪ್ರಸ್ತುತ ರೂ.೧೭೦ ಕೋಟಿ ಠೇವಣಿ, ರೂ.೧೩೮ ಕೋಟಿ ಹೊರಬಾಕಿ ಸಾಲದೊಂದಿಗೆ ಸಂಘದ ಒಟ್ಟು ವ್ಯವಹಾರ ರೂ.೩೦೮ ಕೋಟಿ ತಲುಪಿದೆ. ನಿವ್ವಳ ಅನುತ್ಪಾದಕ ಆಸ್ತಿ ಶೂನ್ಯ ಪ್ರಮಾಣದಲ್ಲಿದ್ದು, ೨೦೧೭-೧೮ನೇ ಸಾಲಿನ ಸ೦ಘದ ಅಮೂಲಾಗ್ರ ಪ್ರಗತಿಯನ್ನು ಪರಿಗಣಿಸಿ ಎಸ್.ಸಿ.ಡಿ.ಸಿ.ಸಿ ಬ್ಯಾ೦ಕ್ ಕೊಡಮಾಡುವ ಸಾಧನಾ ಪ್ರಶಸ್ತಿಯು ಸ೦ಘಕ್ಕೆ ಲಭಿಸಿದೆ, ೨೦೧೮-೧೯ ಸಾಲಿನಲ್ಲಿ ಪುತ್ತೂರಿನ ಕಡಬ ಮತ್ತು ಮ೦ಗಳೂರಿನ ಹಂಪನಕಟ್ಟೆಯಲ್ಲಿ ಎರಡು ಹೊಸ ಶಾಖೆಗಳನ್ನು ಶೀಘ್ರದಲ್ಲಿ ಆರ೦ಭಿಸಲಾಗುವುದು. ಅಲ್ಲದೆ ಮತ್ತೆರಡು ಹೊಸ ಶಾಖೆಗಳನ್ನು ತೆರೆಯಲು ಕ್ರಮವಿಡಲಾಗುವುದು ಮತ್ತು ಐದು ಶಾಖೆಗಳನ್ನು ನವೀಕರಿಸಲು ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಶ್ರೀ ಕೆ. ಜೈರಾಜ್ ಬಿ. ರೈಯವರು ಸಭೆಗೆ ತಿಳಿಸಿದರು.
೨೦೧೭-೧೮ನೇ ಸಾಲಿಗೆ ರೂ.೪.೭೧ ಕೋಟಿ ನಿವ್ವಳ ಲಾಭ ಗಳಿಸಿ ಸದಸ್ಯರ ಪಾಲು ಬ೦ಡವಾಳಕ್ಕೆ ಶೇ.೨೩ ಡಿವಿಡೆ೦ಡನ್ನು ನೀಡುವುದೆ೦ದು ಮಹಾಸಭೆಯಲ್ಲಿ ನಿರ್ಧರಿಸಲಾಯಿತು. ಸಂಘವು ೨೦೧೭-೧೮ನೇ ಸಾಲಿನಲ್ಲಿ ಸಾರ್ವಕಾಲಿಕ ದಾಖಲೆಯ ಪ್ರಗತಿ ಸಾಧನೆಯನ್ನು ಸದಸ್ಯರು ಶ್ಲಾಘಿಸಿ ಸಂಘದ ಈ ಅಪ್ರತಿಮ ಸಾಧನೆಗೆ ಕಾರಣ ಕರ್ತರಾದ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗವನ್ನು ಅಭಿನಂದಿಸಿದರು. ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಜಯಪಾಲ ಶೆಟ್ಟಿ ಹಾಗೂ ನಿರ್ದೇಶಕರುಗಳಾದ ಶ್ರೀಮತಿ ಎ. ರತ್ನಕಾ೦ತಿ
ಶೆಟ್ಟಿ, ಶ್ರೀ ಕೆ. ಸೀತಾರಾಮ ರೈ ಸವಣೂರು, ಡಾ| ಕೆ. ಸುಭಾಶ್ಚ೦ದ್ರ ಶೆಟ್ಟಿ, ಪಿ. ಶಿವರಾಮ ಅಡ್ಯ೦ತಾಯ, ಸಿಎ ಎಚ್.ಆರ್. ಶೆಟ್ಟಿ, ವಿಠಲ ಪಿ. ಶೆಟ್ಟಿ, ಯಂ. ರಾಮಯ ಶೆಟ್ಟಿ, ಶ್ರೀ ಎ೦. ಸೀತಾರಾಮ ಶೆಟ್ಟಿ, ಪಿ.ಬಿ. ದಿವಾಕರ ರೈ, ರವೀ೦ದ್ರನಾಥ ಜಿ. ಹೆಗ್ಡೆ, ಕೆ. ದಯಾಕರ್ ಆಳ್ವ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಡಾ| ಎ೦. ಸುಧಾಕರ ಶೆಟ್ಟಿರವರು
ಉಪಸ್ಥಿತರಿದ್ದರು.
ಪ್ರಭಾರ ಮಹಾಪ್ರಬ೦ಧಕರಾದ ಗಣೇಶ್ ಜಿ.ಕೆ.ಯವರು ಲೆಕ್ಕಪರಿಶೋಧಿತ ಆರ್ಥಿಕ ತಃಖ್ತೆ, ಲಾಭ ವಿ೦ಗಡನೆ, ಬಜೆಟ್, ಬೈಲಾ ತಿದ್ದುಪಡಿ ಪ್ರಸ್ತಾವನೆಗಳನ್ನು ಮ೦ಡಿಸಿದರು.
೨೦೧೭-೧೮ ಸಾಲಿನಲ್ಲಿ ನಿಗದಿತ ಗುರಿಗಳನ್ನು ಸಾಧಿಸಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿದ ಶಾಖೆಗಳನ್ನು ಹಾಗೂ ೨೦೧೭-೧೮ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸಿಬ್ಬಂದಿಗಳ ಮಕ್ಕಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ನಿರ್ದೇಶಕರಾದ ಕೆ. ಸೀತಾರಾಮ ರೈ ಸವಣೂರು ಸ್ವಾಗತಿಸಿ, ಎ೦. ರಾಮಯ ಶೆಟ್ಟಿಯವರು ವ೦ದಿಸಿದರು. ಸಿಬ್ಬ೦ದಿಗಳಾದ ಮೋಹನ್‌ದಾಸ್ ಶೆಟ್ಟಿ ಮತ್ತು ಚ೦ದ್ರಹಾಸ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.