Breaking News

ಪ್ರಶಾಂತ್ ಮುಳ್ಯರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ

Advt_Headding_Middle
Advt_Headding_Middle


ಅಂತರರಾಷ್ಟ್ರೀಯ ಸಂಸ್ಥೆಯಾದ ಏಷ್ಯಾ ಫೆಸಿಫಿಕ್ ಹೆಚ್.ಆರ್.ಎಂ ಕಾಂಗ್ರೆಸ್ ( ವರ್ಲ್ಡ್ ಹೆಚ್.ಆರ್.ಎಂ ಕಾಂಗ್ರೆಸ್) ಕೊಡಮಾಡುವ ಮಾನವ ಸಂಪನ್ಮೂಲ ಬಳಕೆಯ ನೂತನ ಆವಿಷ್ಕಾರ ಹಾಗೂ ಅಳವಡಿಸಿಕೊಳ್ಳುವಿಕೆ ಅಂತರರಾಷ್ಟ್ರೀಯ ಪ್ರಶಸ್ತಿ ಯನ್ನು ಪ್ರಶಾಂತ್ ಮುಳ್ಯ ಪಡೆದುಕೊಂಡಿದ್ದಾರೆ. ಇವರು ಹೈದಾರಬಾದ್ ಮೂಲದ ಶಿವಶಕ್ತಿ ಗ್ರೂಫ್ ಕಂಪೆನಿಯಲ್ಲಿ ಕಳೆದ ೧೬ ವರ್ಷಗಳಿಂದ ಮಾನವ ಸಂಪನ್ಮೂಲ ವಿಭಾಗದ ದಕ್ಷಿಣ ಭಾರತ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದು ಸೆ.೪ ರಂದು ಬೆಂಗಳೂರಿನ ತಾಜ್ ವಿವಾಂತ ಹೋಟೇಲ್‌ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಯನ್ನು ಸ್ವೀಕರಿಸಿದರು.

ಈ ಸಮಾರಂಭದಲ್ಲಿ ಭಾರತ ಸೇರಿದಂತೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ನಾನಾ ದೇಶಗಳ ಕಂಪೆನಿಯ ಮುಖ್ಯಸ್ಥರು ಭಾಗವಹಿಸಿದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಹಾಗೂ ಇದೇ ಸಂಸ್ಥೆ ಕೊಡಮಾಡುವ ಕರ್ನಾಟಕದ ಉತ್ತಮ ಉದ್ಯೋಗದಾತ ಪ್ರಶಸ್ತಿಯನ್ನು ಸೆ.೫ ರಂದು ಪಡೆದುಕೊಂಡರು. ಪ್ರಶಾಂತ್ ಮುಳ್ಯ ರವರು ಮೂಲತಃ ಜ್ಜಾವರ ಗ್ರಾಮದ ಮುಳ್ಯ ನಿವೃತ್ತ ಅರಣ್ಯ ಇಲಾಖೆ ಅಧಿಕಾರಿ ಬೆಳ್ಳಪ್ಪ ಗೌಡ ಮುಳ್ಯ ಮತ್ತು ನೀಲಮ್ಮ ದಂಪತಿಗಳ ಪುತ್ರ. ಪ್ರಸ್ತುತ ಕುಟುಂಬ ಸಮೇತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.