ಸುಳ್ಯ ಲ್ಯಾಂಪ್ ಸೊಸೈಟಿ ಮಹಾಸಭೆ – ರೂ. 13.80 ಲಕ್ಷ ಲಾಭ

Advt_Headding_Middle
Advt_Headding_Middle


ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ. ೨೩ರಂದು ಸುಳ್ಯದ ಅಂಬಟೆಡ್ಕದಲ್ಲಿರುವ ಮರಾಟಿ ಸಮಾಜ ಸೇವಾ ಮಂದಿರ ’ಗಿರಿದರ್ಶಿನಿ’ಯಲ್ಲಿ ಸಂಘದ ಅಧ್ಯಕ್ಷ ಸೀತಾನಂದ ಬೇರ್ಪಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವರದಿ ಸಾಲಿನಲ್ಲಿ ಸಂಘವು ೪೯೦೭ ಎ,ಬಿ ಮತ್ತು ಸಿ ತರಗತಿ ಸದಸ್ಯರನ್ನು ಹೊಂದಿದ್ದು, ರೂ. ೪೦.೮೧ಲಕ್ಷ ಪಾಲು ಬಂಡವಾಳ ಹೊಂದಿದೆ. ಆರ್ಥಿಕ ವರ್ಷದಲ್ಲಿ ಸಂಘವು ೧೦.೫೪ ಕೋಟಿ ವ್ಯವಹಾರ ಮಾಡಿದ್ದು, ಶೇ. ೫ ಡಿವಿಡೆಂಡ್ ವಿತರಿಸಲಿದೆ ಎಂದು ಸಂಘದ ಕಾರ್ಯದರ್ಶಿ ಜತ್ತಪ್ಪ ರೈ ಎ. ವಾರ್ಷಿಕ ವರದಿಯಲ್ಲಿ ವಿವರಿಸಿದರು.

ಸಂಘದ ಅಧ್ಯಕ್ಷ ಸೀತಾನಂದ ಬೇರ್ಪಡ್ಕ ಸ್ವಾಗತಿಸಿ ಪ್ರಸ್ತಾವಣೆಗೈದರು. ಉಪಾಧ್ಯಕ್ಷೆ ಶ್ರೀಮತಿ ರೇವತಿ ದೊಡ್ಡೇರಿ, ನಿರ್ದೇಶಕರುಗಳಾದ ಶಿವರಾಮ ನಾಯ್ಕ ಕೆ, ಶ್ರೀಮತಿ ಸುಮಾವತಿ ಎಂ, ಗೋಪಾಲಕೃಷ್ಣ ಪಿ, ವಿಠಲ ನಾಯ್ಕ್, ಸುಬ್ಬಣ್ಣ ನಾಯ್ಕ್ ಬಳ್ಳಕ್ಕ, ಮಾಧವ ಸುಬ್ರಹ್ಮಣ್ಯ, ಶುಭ ಕುಮಾರ್ ಬಾಳೆಗುಡ್ಡೆ ವೆದಿಕೆಯಲ್ಲಿ ಉಪಸ್ಥಿತರಿದ್ದರು.

೨೦೧೭-೧೮ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೭೫ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಸಂಘದ ವತಿಯಿಂದ ವಿತರಿಸಲಾಯಿತು. ಕಾರ್ಯದರ್ಶಿ ಜತ್ತಪ್ಪ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಂಘದ ಸಿಬ್ಬಂದಿವರ್ಗ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.