ಸುಬ್ರಹ್ಮಣ್ಯ ಮಹಿಳಾ ಸೊಸ್ಯಟಿ ಮಹಾಸಭೆ: ರೂ 41 ಕೋಟಿ ವ್ಯವಹಾರ

Advt_Headding_Middle
Advt_Headding_Middle

ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಸುಬ್ರಹ್ಮಣ್ಯ ಇದರ ಆಡಳಿತ ಮಂಡಳಿ ಹಾಗೂ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ಸೆ. 23 ರಂದು ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್. ರೈರವರ ಅಧ್ಯಕ್ಷತೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನ ರಾಜೀವ ಗಾಂಧಿ ಸೇವಾ ಕೇಂದ್ರ ಸಭಾಭವನದಲ್ಲಿ ಜರಗಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್.ರೈಯವರು ಸಂಘವು ೨೦೧೮ನೇ ಮಾರ್ಚ್ ತಿಂಗಳಲ್ಲಿ ರೂ. ೩೭.೦೬ ಲಕ್ಷ ಪಾಲು ಬಂಡವಾಳ ಹೊಂದಿದ್ದು, ಸದಸ್ಯರ ಹೊರಬಾಕಿ ಸಾಲ ರೂ. ೪.೫೮ ಕೋಟಿಯಷ್ಟಿದೆ. ರೂ. ೬.೭೦ ಕೋಟಿ ಠೇವಣಿ ಸಂಗ್ರಹ ವಾಗಿದು, ವರದಿ ವರ್ಷದಲ್ಲಿ ಸುಮಾರು ರೂ. ೪೧.೦೮ ಕೋಟಿ ವ್ಯವಹಾರ ನಡೆಸಿ ನಿವ್ವಳ ಲಾಭ ರೂ. ೬.೦೯ ಲಕ್ಷ ಗಳಿಸಿರುತ್ತದೆ. ಸದಸ್ಯೆಯರಿಗೆ ಶೇ. ೬ ಡಿವಿಡೆಂಡ್ ನೀಡುವುದೆಂದು ಘೋಷಿಸಿದರು.

ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ಶ್ರೀಮತಿ ಶಶಿಕಲಾ ಶೆಟ್ಟಿ, ಶ್ರೀಮತಿ ಶ್ಯಾಮಲಾ ಮೋಹನ್, ಶ್ರೀಮತಿ ಲೀಲಾ ಮನಮೋಹನ್, ಶ್ರೀಮತಿ ವಿಮಲಾ ರಂಗಯ್ಯ, ಶ್ರೀಮತಿ ಚಂದ್ರಾಕ್ಷಿ ಜೆ. ರೈ, ಶ್ರೀಮತಿ ನಿರಂಜಿನಿ ಆರ್. ಶೆಟ್ಟಿ, ಶ್ರೀಮತಿ ನಾಗವೇಣಿ ಎಸ್, ಶ್ರೀಮತಿ ಲೀಲಾವತಿ ಉಪ್ಪಳಿಕೆ,  ಶ್ರೀಮತಿ ಅನಸೂಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸಂಧ್ಯಾ ಸಿ.ರಾವ್ ಪ್ರಾರ್ಥಿಸಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಾರಿಜಾಕ್ಷಿ ಪಿ. ವಾರ್ಷಿಕ ವರದಿ ವಾಚಿಸಿದರು.

ಸಂಘದ ಉಪಾಧ್ಯಕ್ಷೆ ಶ್ರೀಮತಿ ತಾರಾ ಮಲ್ಲಾರ ವಂದಿಸಿದರು. ಸದ್ರಿ ಸಾಲಿನಲ್ಲಿ ಅತೀ ಹೆಚ್ಚು ವ್ಯವಹಾರ ನಡೆಸಿದ ಸದಸ್ಯೆಯರಿಗೆ ಹಾಗೂ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಿದ ಸದಸ್ಯೆಯರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.