ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸಿ ಮತ್ತು ರೈತ ಸಾಲಮನ್ನಾ ತಾರತಮ್ಯ ನೀತಿ ವಿರೋಧಿಸಿ ಸಹಕಾರ ಭಾರತಿ ಪ್ರತಿಭಟನೆ

Advt_Headding_Middle
Advt_Headding_Middle

ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಮತ್ತು ರೈತ ಸಾಲ ಮನ್ನಾ ತಾರತಮ್ಯ ನೀತಿ ವಿರೋಧಿಸಿ ಸಹಕಾರ ಭಾರತಿ ನೇತೃತ್ವದಲ್ಲಿ ಸುಳ್ಯ ತಾಲೂಕು ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನದ್ದೇಶಿಸಿ ಸಹಕಾರ ಭಾರತಿಯ ರಾಷ್ಟ್ರೀಯ ಉಪಾಧ್ಯಕ್ಷ ಪದ್ಮನಾಭ ಭಟ್ ಕೊಂಕೋಡಿ ಪ್ರಧಾನ ಭಾಷಣ ಮಾಡಿದರು. ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎ.ವಿ.ತೀರ್ಥರಾಮ, ಜೇನು ಸಹಕಾರಿ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಎಪಿಎಂಸಿ ಅಧ್ಯಕ್ಷ ಅಡ್ಡಂತ್ತಡ್ಕ ದೇರಣ್ಣ ಗೌಡ ಮೊದಲಾದವರು ಮಾತನಾಡಿದರು. ತಾಲೂಕು ಸಹಕಾರ ಭಾರತಿ ಅಧ್ಯಕ್ಷ ಹರೀಶ್ ಮೂರ್ಜೆ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ವಿಷ್ಣು ಭಟ್ ಎಲಿಮಲೆ ಮನವಿ ವಾಚಿಸಿ ವಂದಿಸಿದರು. ಕಾರ್ಯದರ್ಶಿ ಸುದರ್ಶನ ಪಾತಿಕಲ್ಲು ಕಾರ್ಯಕ್ರಮ ನಿರೂಪಿಸಿದರು.

ಬಿಜೆಪಿ ಮತ್ತು ಸಹಕಾರ ಭಾರತಿ ಪ್ರಮುಖರಾದ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಪ್ರಸನ್ನ ಕುಂಞಿಹಿತ್ಲು, ಭವಾನಿಶಂಕರ ಮುರುಳ್ಯ, ಚಂದ್ರಶೇಖರ ಶಾಸ್ತ್ರಿ, ವೆಂಕಟ್ರಮಣ, ಭಾಗೀರಥಿ ಮುರುಳ್ಯ, ಚನಿಯ ಕಲ್ತಡ್ಕ, ಹರಿಣಾಕ್ಷಿ ನಾರಾಯಣ, ಶೀಲಾವತಿ ಮಾಧವ, ಎನ್.ಎ.ರಾಮಚಂದ್ರ, ರಘುನಾಥ ರೈ ಕೇನ್ಯ, ಎನ್.ಟಿ.ವಸಂತ, ಪದ್ಮನಾಭ ಚೌಟಾಜೆ, ಜಯರಾಮ ರೈ ಜಾಲ್ಸೂರು, ಅಬ್ದುಲ್ ಕುಂಞಿ ನೇಲ್ಯಡ್ಕ, ಮುಳಿಯ ಕೇಶವ ಭಟ್, ಸುಬೋಧ್ ಶೆಟ್ಟಿ ಮೇನಾಲ, ಕರುಣಾಕರ ಕೋಲ್ಚಾರ್, ವಿಶ್ವನಾಥ ಬಿಳಿಮಲೆ, ಸತೀಶ್ ಕೆಮನಬಳ್ಳಿ, ಸತೀಶ್ ಎಲಿಮಲೆ, ಸಂತೋಷ್ ಜಾಕೆ, ಶಿವಪ್ರಸಾದ್ ಉಗ್ರಾಣಿಮನೆ, ಸುರೇಶ್ ಕಣೆಮರಡ್ಕ, ಪುಷ್ಪಾ ಮೇದಪ್ಪ, ವಿನುತಾ ಪಾತಿಕಲ್ಲು, ಬಾಲಚಂದ್ರ ದೇವರಗುಂಡ, ತುಳಸಿನಿ ದೇವರಗುಂಡ, ಸುಧಾಕರ ರೈ ಬಾಳಿಲ, ದುರ್ಗೇಶ್ ಪಾರೆಪ್ಪಾಡಿ, ಶಿವಾನಂದ ಕುಕ್ಕುಂಬಳ, ರಾಮಕೃಷ್ಣ ರೈ ಆಲಂಕಳ್ಯ, ಉಮೇಶ್ ಪ್ರಭು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.