ಮುಖ್ಯಮಂತ್ರಿಗಳೇ, ನಾವು ದಂಗೆ ಏಳಬೇಕಾಗುತ್ತದೆ : ಪದ್ಮನಾಭ ಕೊಂಕೋಡಿ

Advt_Headding_Middle
Advt_Headding_Middle

ದಂಗೆಯ ಮಾತನಾಡುವ ಮುಖ್ಯಮಂತ್ರಿಗಳು ನಮ್ಮ ರಾಜ್ಯದಲ್ಲಿದ್ದಾರೆ. ಕೃಷಿಕರಿಗೆ ಈ ರೀತಿ ಅನ್ಯಾಯವಾದರೆ ನಾವು ದಂಗೆ ಏಳಬೇಕಾಗುತ್ತದೆ. ನೀವು ಅಧಿಕಾರಿದ ಕುರ್ಚಿಯಿಂದ ಇಳಿಯುವ ತನಕ ನಮ್ಮ ಹೋರಾಟ ಮುಗಿಯುವುದಿಲ್ಲ ಎಂದು ಸಹಕಾರ ಭಾರತಿಯ ರಾಷ್ಟ್ರೀಯ ಉಪಾಧ್ಯಕ್ಷ ಪದ್ಮನಾಭ ಭಟ್ ಕೊಂಕೋಡಿ ಹೇಳಿದ್ದಾರೆ.


ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಮತ್ತು ರೈತ ಸಾಲ ಮನ್ನಾ ತಾರತಮ್ಯ ನೀತಿ ವಿರೋಧಿಸಿ ಸಹಕಾರ ಭಾರತಿ ನೇತೃತ್ವದಲ್ಲಿ ಸುಳ್ಯ ತಾಲೂಕು ಕಛೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಮುಖ್ಯ ಮಂತ್ರಿಯವರಿಗೆ ಅಧಿಕಾರದ ಕೊನೆಯ ದಿನಗಳ ನೆನಪಾಗುತ್ತಿದೆ. ಹೀಗಾಗಿ ರೈತರಿಗೆ ಸ್ಪಂದಿಸುವುದನ್ನು ಬಿಟ್ಟು ದೇವಸ್ಥಾನಗಳಿಗೆ ಯಾತ್ರೆ ಹೋಗುತ್ತಿದ್ದಾರೆ. ಇಂದು ರೈತ ಅತ್ಯಂತ ಕಷ್ಟದಲ್ಲಿದ್ದಾನೆ. ಸರಕಾರ ರೈತನ ಬೆಳೆ ಸಾಲ ಪೂರ್ತಿ ಮನ್ನಾ ಮಾಡಬೇಕು ಮತ್ತು ಮನ್ನಾ ಹಣವನ್ನು ಸಹಕಾರಿ ಸಂಘಗಳಿಗೆ ಶೀಘ್ರದಲ್ಲೇ ಪಾವತಿಸಬೇಕು ಎಂದ ಅವರು, ಸಿದ್ದರಾಮಯ್ಯ ಘೋಷಿಸಿದ ಸಾಲ ಮನ್ನಾ ಹಣವೇ ಬಹುತೇಕ ಸಹಕಾರಿ ಸಂಘಗಳಿಗೆ ಬಂದಿಲ್ಲ ಎಂದು ಆರೋಪಿಸಿದರು. ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.