Breaking News

ರೈತರಿಗೆ ಮಾಡಿದ ಮೋಸವನ್ನು ಮುಖ್ಯಮಂತ್ರಿ ಅನುಭವಿಸುತ್ತಾರೆ : ಕೃಷ್ಣಪ್ರಸಾದ್ ಮಡ್ತಿಲ

Advt_Headding_Middle
Advt_Headding_Middle

ಅಧಿಕಾರ ಸ್ವೀಕರಿಸಿದ 24  ಗಂಟೆಯೊಳಗೆ ರೈತರ ಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿದ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ 24 ಗಂಟೆ ಕಳೆದರೂ ಸಾಲ ಮನ್ನಾ ಆಗಿಲ್ಲ. ರೈತರಿಗೆ ಈ ರೀತಿ ಮೋಸ ಮಾಡಿದ ಮುಖ್ಯಮಂತ್ರಿಯವರು ಇದರ ಪ್ರತಿಫಲ ಅನುಭವಿಸುತ್ತಾರೆಂದು ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಹೇಳಿದ್ದಾರೆ.

ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಮತ್ತು ರೈತ ಸಾಲ ಮನ್ನಾ ತಾರತಮ್ಯ ನೀತಿ ವಿರೋಧಿಸಿ ಸಹಕಾರ ಭಾರತಿ ನೇತೃತ್ವದಲ್ಲಿ ಸುಳ್ಯ ತಾಲೂಕು ಕಛೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಾಲಮನ್ನಾ ಮಾಡುವುದಾಗಿ ಅವರು ಹೇಳಿದ ಕಾರಣವೇ 37 ಸೀಟಾದರೂ ಬಂತು. ಇಲ್ಲದಿದ್ದರೆ 5 ಸೀಟುಗಳಿಗಿಂತ ಜಾಸ್ತಿ ಬರುತ್ತಿರಲಿಲ್ಲ.

 ಕುಮಾರಸ್ವಾಮಿ ಮಣ್ಣಿನ ಮಗನಲ್ಲ. ಅವರೊಬ್ಬ ಸಿನಿಮಾ ಉದ್ಯಮಿ. ಹಾಗಾಗಿಯೇ ಅವರಿಗೆ ರೈತನ ಕಷ್ಟಗಳ ಅರಿವಿಲ್ಲ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.