HomePage_Banner
HomePage_Banner
HomePage_Banner
HomePage_Banner

ರೈತನ ನೆರವಿಗೆ ಸರಕಾರ ಬಾರದಿದ್ದರೆ ಯಾರೂ ಸಾಲ ಕಟ್ಟಬಾರದು : ಚಂದ್ರಾ ಕೋಲ್ಚಾರ್

ದಕ್ಷಿಣ ಕನ್ನಡ ಜಿಲ್ಲೆಯ ರೈತರು ಸಕಾಲದಲ್ಲಿ ಸಾಲ ಮರುಪಾವತಿಸುವವರು. ಆದರೆ ರೈತನ ಸಂಕಷ್ಟದ ಸಂದರ್ಭದಲ್ಲಿ ಸರಕಾರ ಆತನ ನೆರವಿಗೆ ಬಾರದಿದ್ದಲ್ಲಿ ಯಾರೂ ಕೂಡಾ ಸಾಲ ಕಟ್ಟುವುದಿಲ್ಲ ಎಂದು ಘೋಷಿಸಬೇಕು ಎಂದು ದ.ಕ.ಜಿಲ್ಲಾ ಜೇನು ಸಹಕಾರಿ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಹೇಳಿದರು.


ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಮತ್ತು ರೈತ ಸಾಲ ಮನ್ನಾ ತಾರತಮ್ಯ ನೀತಿ ವಿರೋಧಿಸಿ ಸಹಕಾರ ಭಾರತಿ ನೇತೃತ್ವದಲ್ಲಿ ಸುಳ್ಯ ತಾಲೂಕು ಕಛೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸರಕಾರದ ಕಾರ್ಯ ಚಟ್ಟ ಕಟ್ಟಿ ಹೆಣ ಕಾಯುವಂತೆ ಆಗಿದೆ. ಮೊದಲೇ ಸಾಲ ಮನ್ನಾ ಘೋಷಿಸಿ ಈಗ ಮೀನ ಮೇಷ ಎಣಿಸುತ್ತಿದ್ದಾರೆ. ಮೂರು ದಿವಸ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಧೈರ್ಯದಿಂದ ಸಾಲಮನ್ನಾ ಘೋಷಣೆ ಮಾಡಿದರು. ಆದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ೩ ತಿಂಗಳು ಕಳೆದರೂ ರೈತನ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.