ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ – 78.5 ಕೋಟಿ ರೂ. ವ್ಯವಹಾರ,25ಲಕ್ಷ ರೂ ಲಾಭ

Advt_Headding_Middle
Advt_Headding_Middle

 

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ೨೦೧೭-೧೮ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ವಠಾರದಲ್ಲಿ ಸೆ.೨೩.ರಂದು ನಡೆಯಿತು. ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟ ವಹಿಸಿದ್ದರು.


ಸಂಘವು ೨೦೧೭-೧೮ ನೇ ಸಾಲಿನಲ್ಲಿ ರೂ.೭೮ ಕೋಟಿ ೪೯ ಲಕ್ಷಕ್ಕೂ ಮಿಕ್ಕಿ ರೂ.ವ್ಯವಹಾರ ನಡೆಸಿ ರೂ ೨೫ ಲಕ್ಷದ ೩೫ ಸಾವಿರ ನಿವ್ವಳ ಲಾಭ ಗಳಿಸಿದ್ದು. ಶೇ.೯ ಡಿವಿಡೆಂಟ್ ನೀಡಲಿದೆ. ೧೧.೧೦,೭೫.೪೮೫,೨೨ ರೂ ಠೇವಣಾತಿ ಹೊಂದಿದೆ.೧೫.೭೭ ,೩೪,೦೨೪.೦೦ ವಿವಿಧ ಸಾಲ ನೀಡಲಾಗಿದೆ.ಶೇ.೯೮.೭೨ ಸಾಲ ವಸೂಲಾತಿಯಾಗಿದ್ದು, ಆಡಿಟ್ ವರ್ಗಿಕರಣದಲ್ಲಿ ?ಎ? ತರಗತಿಯಲ್ಲಿ ಮುಂದುವರಿಯುತ್ತಿದೆ.ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸುಬ್ರಹ್ಮಣ್ಯ ಜೋಷಿ ಮಂಡಿಸಿದರು.
ಸಂಘದ ಉಪಾಧ್ಯಕ್ಷ ಗಂಗಾಧರ ಗೌಡ ಎ ,ನಿರ್ದೇಶಕರಾದ ಶಂಕರನಾರಾಯಣ ಭಟ್ ಕೆ, ಮಹಾಬಲ ಕೆ, ಮಹಮ್ಮದ್ ಹನೀಫ್ ಎಂ ಕೆ, ಸುಧಾ ಯಸ್ ಭಟ್ , ಲಲಿತಾ ಪಿ, ರಾಮ ನಾಯ್ಕ ಯು, ಲಕ್ಷ್ಮೀನಾರಾಯಣ ನಡ್ಕ, ಕರುಣಾಕರ ಜೆ, ಕಾರ್ಯನಿರ್ವಹಣಾಧಿಕಾರಿ ಕೆ.ಸುಬ್ರಹ್ಮಣ್ಯ ಜೋಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದ ಸಾಧಕರಿಗೆ ಮತ್ತು ರಸ್ತೆಗಾಗಿ ಜಾಗ ಬಿಟ್ಟ ದಾನಿಗಳಿಗೆ ಸನ್ಮಾನ ನಡೆಯಿತು.ಕಾರ್‍ಯಕ್ರಮದಲ್ಲಿ ನಾರಾಯಣ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟ ಸ್ವಾಗತಿಸಿದರು. ಲೆಕ್ಕ ಸಂಶೋಧನಾ ವರದಿ ಮತ್ತು ವಾರ್ಷಿಕ ಲೆಕ್ಕ ಪತ್ರಗಳನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸುಬ್ರಹ್ಮಣ್ಯ ಜೋಷಿ ಮಂಡಿಸಿದರು. ಶಾಖಾ ವ್ಯವಸ್ಥಾಪಕ ಪ್ರಶಾಂತ್ ಜೆ ಸನ್ಮಾನಿತರ ಪರಿಚಾಯಿಸಿದರು.ನಿರ್ದೇಶಕ ಲಕ್ಷ್ಮೀನಾರಾಯಣ ನಡ್ಕ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.