ವಿದ್ಯಾರ್ಥಿನಿಯೊಂದಿಗೆ ಬಸ್ ಚಾಲಕನ ಪ್ರೇಮ, ಯುವತಿಯ ಮನೆಯವರಿಂದ ಯುವಕನಿಗೆ ಥಳಿತ

Advt_Headding_Middle
Advt_Headding_Middle

ಖಾಸಗಿ ಬಸ್ ಚಾಲಕ ಮತ್ತು ವಿದ್ಯಾರ್ಥಿನಿಯೊಬ್ಬಳ ಪ್ರೇಮ ಪ್ರಕರಣ ಯುವತಿಯ ಮನೆಯವರಿಗೆ ತಿಳಿದು ಆಕೆಯ ಸಂಬಂಧಿಕರು ಮಂಡೆಕೋಲಿಗೆ ಬಂದು ಬಸ್ ನಲ್ಲಿದ್ದ ಚಾಲಕನನ್ನು ಹೊರಗೆಳೆದು ಥಳಿಸಿ ಎಚ್ಚರಿಕೆ ನೀಡಿದ ಘಟನೆ ಸೆ.೧೭ರಂದು ನಡೆದಿದೆ.

ಸುಳ್ಯ-ಮಂಡೆಕೋಲು ಖಾಸಗಿ ಬಸ್‌ನಲ್ಲಿ ಚಾಲಕನಾಗಿದ್ದ ಕಲ್ಮಕಾರಿನ ಶ್ರೀನಿವಾಸ್ ಎಂಬಾತ ಮಂಡೆಕೋಲು ಗಡಿ ಭಾಗದ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುತ್ತಿದ್ದನೆಂದೂ, ಆಕೆಯನ್ನು ಬಸ್‌ನಲ್ಲಿ ಅಲ್ಲದೆ, ಕಾರಿನಲ್ಲಿ ಸುಳ್ಯಕ್ಕೆ ಕರೆದು ಸುತ್ತಾಡಿಸುತ್ತಿದ್ದನೆಂದೂ ಹೇಳಲಾಗಿದೆ. ಕೆಲವು ದಿನಗಳ ಹಿಂದೆ ಮಂಡೆಕೋಲು ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಹಾಗೂ ಮತ್ತಿತರ ಕೆಲವರು ಈ ಪ್ರಚಾರದ ಕುರಿತು ಶ್ರೀನಿವಾಸರನ್ನು ಪ್ರಶ್ನಿಸಿದರಲ್ಲದೆ, ಈ ರೀತಿ ನಡೆದುಕೊಳ್ಳದಂತೆ ಬುದ್ದಿವಾದ ಹೇಳಿದರೆಂದೂ ತಿಳಿದು ಬಂದಿದೆ.

ಈ ಬುದ್ದಿವಾದದ ಬಳಿಕವೂ ಶ್ರೀನಿವಾಸ ಮತ್ತು ಆ ಯುವತಿ ಜತೆಯಲ್ಲಿ ಹೋಗುತ್ತಿರುವುದು ಮುಂದುವರಿಯಿತೆಂದೂ ಈ ವಿಷಯ ಯುವತಿಯ ಕಡೆಯವರಿಗೆ ತಿಳಿದು ಸೆ.೧೮ರಂದು ರಾತ್ರಿ ಮಂಡೆಕೋಲಿನಲ್ಲಿ ಬಸ್‌ನೊಳಗೆ ಇದ್ದ ಶ್ರೀನಿವಾಸ್‌ನನ್ನು ಹೊರಗೆ ಕರೆದು ಪ್ರಶ್ನಿಸಿದರಲ್ಲದೆ, ಆತನಿಗೆ ಥಳಿಸಿದರೆನ್ನಲಾಗಿದೆ. ಬಳಿಕ ವಿಷಯ ಬಸ್‌ನವರಿಗೆ ತಿಳಿದು ಶ್ರೀನಿವಾಸನನ್ನು ಕೆಲಸದಿಂದ ಬಿಟ್ಟಿರುವುದಾಗಿ ತಿಳಿದು ಬಂದಿದೆ.

ಮಣಿಕಂಠ – ನೀತಾ ಪ್ರೇಮವಿವಾಹ
ಸುಳ್ಯ-ಮಂಡೆಕೋಲು-ಅಡೂರಿಗಾಗಿ ಹೋಗುತ್ತಿದ್ದ ಖಾಸಗಿ ಬಸ್‌ನಲ್ಲಿ ಚಾಲಕನಾಗಿದ್ದ ಕಲ್ಮಕಾರಿನ ಮಣಿಕಂಠ ಎಂಬಾತನೂ ಕೂಡಾ ಮಂಡೆಕೋಲಿನ ವೆಂಕಟ್ರಮಣ ಎಂಬವರ ಪುತ್ರಿ ನೀತಾರನ್ನು ಪ್ರೀತಿಸಿ ಮದುವೆಯಾದರೆನ್ನಲಾಗಿದೆ.
ಆಕೆ ಸುಳ್ಯದಲ್ಲಿ ಮೆಡಿಕಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು ಮಣಿಕಂಠ ಚಲಾಯಿಸುತ್ತಿದ್ದ ಬಸ್‌ನಲ್ಲಿ ಸುಳ್ಯಕ್ಕೆ ಬಂದು ಹೋಗುತ್ತಿದ್ದಳೆಂದೂ ಈ ವೇಳೆ ಅವರೊಳಗೆ ಪ್ರೀತಿ ಬೆಳೆಯಿತೆನ್ನಲಾಗಿದೆ. ಪ್ರೀತಿಗೆ ಮನೆಯವರ ವಿರೋಧ ವಿದ್ದುದರಿಂದ ಆಕೆ ಮಣಿಕಂಠನ ಜತೆ ಮನೆ ಬಿಟ್ಟು ಬಂದಿದ್ದಳು. ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿ ಅವರಿಬ್ಬರು ವಿವಾಹವಾದರೆಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.