ಠಾಣೆಗೆ ಹೋದ ವ್ಯಕ್ತಿಗೆ ಪೋಲೀಸ್ ಹಲ್ಲೆ : ಆರೋಪ –  ಕಲ್ಕುಡ ದೈವಸ್ಥಾನಕ್ಕೆ ಪ್ರಮಾಣಕ್ಕೆ ಬರಲಿ : ಎಸ್.ಐ.

Advt_Headding_Middle
Advt_Headding_Middle

ಪಾಸ್‌ಪೋರ್ಟ್ ಕುರಿತು ಮಾಹಿತಿ ಪಡೆಯಲೆಂದು ತಾನು ಪೋಲೀಸ್ ಠಾಣೆಗೆ ಹೋದ ಸಂದರ್ಭ ಠಾಣೆಯೊಳಗೆ ಪೋಲೀಸ್ ಸಿಬ್ಬಂದಿಯೊಬ್ಬರು ತನಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಸಂಪಾಜೆಯ ನಾರಾಯಣ ಎಂಬವರು ಆರೋಪಿಸಿದ್ದಾರೆ. ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಲ್ಲದೆ, ಸುದ್ದಿ ಕಚೇರಿಗೆ ಬಂದು ಹಲ್ಲೆ ನಡೆದಿರುವ ಕುರಿತು ಆರೋಪ ಮಾಡಿದರು. ಆದರೆ ಸುಳ್ಯ ಪೋಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.

`’ ಎಂ.ವೆಂಕಪ್ಪ ಗೌಡರಿಗೆ ಆಸಿಡ್ ಎಸೆದ ಪ್ರಕರಣಕ್ಕೆ ಸಂಬಂಧಿಸಿ ನನ್ನ ಮೇಲೆ ಈ ಹಿಂದೆ ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದಕ್ಕಾಗಿ ನಾನು ಶಿಕ್ಷೆ ಅನುಭವಿಸಿ ಬಂದು ಊರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿzನೆ. ನನ್ನ ಮೇಲೆ ಇದ್ದ ಕೇಸು ಮುಕ್ತಾಯವಾಗಿದ್ದರಿಂದ ನನಗೆ ಪಾಸ್‌ಪೋರ್ಟ್ ಮಾಡಬಹುದೇ ಎಂಬ ಮಾಹಿತಿಯನ್ನು ಪಡೆಯಲು ಪೋಲೀಸ್ ಠಾಣೆಗೆ ಹೋಗಿದ್ದೆ. ಹೋಗಿ ಅಲ್ಲಿ ಕುಳಿತುಕೊಂಡಿರುವಾಗ ಒಬ್ಬರು ಪೋಲೀಸ್ ಸಿಬ್ಬಂದಿ ಬಂದು ನಿನ್ನ ಹೆಸರು ನಾರಾಯಣ ಅಲ್ಲವೇ. ನಿನ್ನ ಮೇಲೆ ಈ ಹಿಂದೆ ಪ್ರಕರಣ ಇತ್ತಲ್ಲ ಎಂದು ಹೇಳಿ ನನ್ನ ಶರ್ಟ್ ಹಿಡಿದು ಹಲ್ಲೆ ನಡೆಸಿದ್ದಾರೆ. ನನ್ನ ಕಿವಿಯಲ್ಲಿ ರಕ್ತ ಬಂದಿದೆ. ಬಳಿಕ ಅಲ್ಲಿಂದ ನಾನು ಹೊರಟು ಬಂದೆ ಎಂದು ಸುದ್ದಿ ಕಚೇರಿಗೆ ಬಂದು ತನ್ನ ಅಳಲನ್ನು ತೋಡಿಕೊಂಡರು.

ಹಲ್ಲೆ ಮಾಡಿಲ್ಲ, ಕಲ್ಕುಡ ದೈವಸ್ಥಾನಕ್ಕೆ ಪ್ರಮಾಣಕ್ಕೆ ಬರಲಿ : ಎಸ್.ಐ.
ಈ ಕುರಿತು ಸುಳ್ಯ ಎಸ್.ಐ.ಮಂಜುನಾಥರನ್ನು ಸಂಪರ್ಕಿಸಿ ವಿಚಾರಿಸಿದಾಗ, “ಅವರು ಯಾವುದೋ ಜಮೀನಿನ ವಿಚಾರಕ್ಕೆ ಬಂದಿದ್ದರು. ನಾವು ಅದನ್ನು ಕೋರ್ಟಿನಲ್ಲಿ ಇತ್ಯರ್ಥ ಪಡಿಸಬಹುದೆಂಬ ಮಾಹಿತಿ ನೀಡಿzವೆ. ಠಾಣೆಗೆ ಬರುವವರ ಮೇಲೆ ಯಾಕೆ ಹಲ್ಲೆ ಮಾಡಬೇಕು. ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ದೈವ ಭಕ್ತ. ನಾವು ಹಲ್ಲೆ ಮಾಡಿದ್ದರೆ ಅವರು ಕಲ್ಕುಡ ದೈವಸ್ಥಾನದಲ್ಲಿ ಬಂದು ಪ್ರಮಾಣ ಮಾಡಲಿ“ ಎಂದು ಸುದ್ದಿಗೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.