Breaking News

ಉತ್ತಮ ಆಹಾರ ಪದ್ಧತಿಯಿಂದ ದೇಹಾರೋಗ್ಯ ಕಾಪಾಡಿಕೊಳ್ಳಬಹುದು-ಲಕ್ಷ್ಮಿ ಆರ್ ಪಿ

Advt_Headding_Middle
Advt_Headding_Middle

 

ನಾವು ತೆಗೆದುಕೊಳ್ಳುವ ಆಹಾರಕ್ರಮದ ಮೇಲೆ ನಮ್ಮ ದೇಹಾರೋಗ್ಯ ಸ್ಥಿತಿಯಿರುತ್ತದೆ. ಆಧುನಿಕ ಯುಗಕ್ಕೆ ತೆರೆದುಕೊಂಡ ಹಾಗೆ ನಮ್ಮ ಕಾಯಿಲೆಯನ್ನು ನಾವೇ ಬರಿಸಿಕೊಳ್ಳುತ್ತಿದ್ದೇವೆ. ಇಂದಿನ ಆಹಾರ ಕ್ರಮದಿಂದಾಗಿ ದುಡಿದ ಹಣ ಔಷಧಿಗಾಗಿಯೇ ಖರ್ಚಾಗುತ್ತಿದೆ. ಹಾಗಾಗಿ ಆಹಾರ ಸೇವನೆಯಲ್ಲಿ ಮುನ್ನೆಚ್ಚರಿಕೆ ಅಗತ್ಯ ಎಂದು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಹಾರತಜ್ಞೆ ಲಕ್ಷ್ಮಿ ಆರ್ ಪಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಪೌಷ್ಟಿಕ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ “Food Keeps Tradition Alive” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಆಂಗ್ಲಭಾಷಾ ವಿಭಾಗದ ಉಪನ್ಯಾಸಕಿ ರಂಜಿತಾ ಗಿರೀಶ್ ಮಾತನಾಡಿ, ಜಂಕ್ ಆಹಾರ ಸೇವನೆಯಿಂದ ಇವತ್ತು ಭೀಕರ ಕಾಯಿಲೆಗಳಿಗೆ ತುತ್ತಾಗುವುದು ವಿಪರ‍್ಯಾಸವೇ ಸರಿ, ನಮ್ಮ ಹೊಟ್ಟೆಯಲ್ಲಿ ಇವತ್ತು ದಕ್ಷಿಣ ಅಮೇರಿಕಾ ಇದೆ ಅದನ್ನು ದಕ್ಷಿಣ ಕರ್ನಾಟಕಕ್ಕೆ ಬದಲಾಯಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದರು.
ಕಾರ್ಯಾಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಹಾರ ಸೇವನಾ ಪದ್ಧತಿಯನ್ನು ನಾವು ಅಳವಡಿಸಿಕೊಂಡಾಗ ಆರೋಗ್ಯವನ್ನು ಸುಸ್ಥಿತಿಯಲಿಟ್ಟುಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳಿಗೆ ಆಹಾರ ಪದ್ಧತಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿ ಎನ್ನುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ ಎಂದರು.
ಘಟಕ ನಾಯಕರುಗಳಾದ ದೀಕ್ಷಿತ್ ಕೆ ಪಿ ಹಾಗೂ ನಳಿನಿ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚೈತ್ರಾ, ಸ್ಮಿತಾ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಹವ್ಯಾ ಸ್ವಾಗತಿಸಿ ಅಕ್ಷತಾ ಹೆಚ್ ಬಿ ವಂದಿಸಿದರು. ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.