ಪಂಜ : ಶ್ರೀ ಶಾರದೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Advt_Headding_Middle
Advt_Headding_Middle

ತುಳವ ಬೊಳ್ಳಿ ದಯಾನಂದ ಕತ್ತಲ್‌ಸಾರ್ ಉಪನ್ಯಾಸ

ಶ್ರೀಶಾರದಾಂಬಾ ಭಜನಾ ಮಂಡಳಿ ಪಂಜ,ಶ್ರೀ ಶಾರದೋತ್ಸವ ಸಮಿತಿ ಪಂಜ ಇದರ ಆಶ್ರಯದಲ್ಲಿ ಜರುಗುವ ಶ್ರೀ ಶಾರದೋತ್ಸವ ೨೦೧೮ ಇದರ ಉತ್ಸವವು ಅ.೧೮.ರಂದು ಭಜನಾ ಮಂದಿರದಲ್ಲಿ ಜರುಗಲಿದೆ.

ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜರುಗಿತು.ಉತ್ಸವ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ ಅಧ್ಯಕ್ಷತೆ ವಹಿಸಿದ್ದರು.ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಉತ್ಸವ ಸಮಿತಿ ಕಾರ್ಯದರ್ಶಿ ಜಯರಾಮ ಕಲ್ಲಾಜೆ, ಕೋಶಾಧ್ಯಕ್ಷ ಪ್ರಕಾಶ್ ಜಾಕೆ , ಬಾಲಕೃಷ್ಣ ಗೌಡ ಕುದ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪಸಮಿತಿಗಳ ಸಂಚಾಲಕರು,ಸದಸ್ಯರು ಉಪಸ್ಥಿತರಿದ್ದರು.ಈ ವರುಷ ವಿಶೇಷವಾಗಿ ಭಾರಿಗೆ ತುಳವ ಬೊಳ್ಳಿ ಖ್ಯಾತಿಯ ದಯಾನಂದ ಕತ್ತಲ್‌ಸಾರ್ ಉಪನ್ಯಾಸ ನೀಡಲಿದ್ದಾರೆ. ಕಬ್ಬಡಿ ಪಂದ್ಯಾಟ, ಕ್ರೀಡಾ,ಸಾಂಸ್ಕೃತಿಕ ಸ್ಪರ್ಧೆಗಳು ಜರುಗಲಿದ್ದು, ಶೋಭಾಯಾತ್ರೆಯಲ್ಲಿ ಬಲು ಅಪರೂಪದ ಸಿದ್ಧವೇಷ, ಕಲ್ಲಡ್ಕದ ಆಕರ್ಷಕ ಟ್ಯಾಬ್ಲೊ, ತಾಲೀಮೂ ಪ್ರದರ್ಶನ, ಚೆಂಡೆವಾದನ, ನೃತ್ಯ ಭಜನೆ, ಹುಲಿವೇಷ ಕುಣಿತ ಆಕರ್ಷಣೆಯಾಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.