Breaking News

ಎಡಮಂಗಲ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆ

Advt_Headding_Middle
Advt_Headding_Middle

ಎಡಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಕಘದ ವಠಾರದಲ್ಲಿ ಸೆ.19ರಂದು ಸಂಘದ ಅಧ್ಯಕ್ಷ ಜಯಪ್ರಕಾಶರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸದಸ್ಯರು 5 ಲಕ್ಷದ 19 ಸಾವಿರ 860 ಲೀಟರ್ ಹಾಲು ಪೂರೈಕೆ ಮಾಡಿ ಗುಣಮಟ್ಟ ಕಾಯ್ದುಕೊಂಡಿದೆ. 9 ಲಕ್ಷದ 19 ಸಾವಿರದ 856ರೂ ನಿವ್ವಳ ಲಾಭ ಬಂದಿರುತ್ತದೆ. ಸಂಘದ ವತಿಯಿಂದ 1 ಲೀಟರ್ ಹಾಲಿಗೆ ೦.75 ಬೊನಸ್ಸು ಮತ್ತು 25% ಡಿವಿಡೆಂಡ್ ನೀಡಲಾಗುವುದೆಂದು ಅಧ್ಯಕ್ಷರು ತಿಳಿಸಿದರು.

 

ಒಕ್ಕೂಟದ ಮೂಲಕ ಸಿಗುವ ಸೌಲಭ್ಯಗಳು ಮತ್ತು ಸವಲತ್ತುಗಳ ಬಗ್ಗೆ ಮಾಹಿತಿ ಮತ್ತು ಇನ್ನೂ ಹೆಚ್ಚೆಚ್ಚು ಸದಸ್ಯರಿಗೆ ಸಹಕಾರ ನೀಡುವುದೆಂದು ವಿಸ್ತಾರಣಾಧಿಕಾರಿ ಹರೀಶ್ ಕುಮಾರ್ ಹೇಳಿದರು. ಹೆಚ್ಚು ಹಾಲು ಮತ್ತು ಗುಣಮಟ್ಟದ ಹಾಲು ಹಾಕುವವರಿಗೆ ನೀಡುವ ಬಹುಮಾನವನ್ನು ಸುಧೀರ್ ಕುಮಾರ್ ಶೆಟ್ಟಿ ಕಟ್ಟಬೀಡು-ಪ್ರಥಮ, ವೆಂಕಮ್ಮ ರೈ ಕಿನ್ಯಾಳ-ದ್ವಿತೀಯ ಬಹುಮಾನ, ಜಗದೀಶ ಶೆಟ್ಟಿ- ಕಿನ್ಯಾಳ ಮತ್ತು ಚತುರ್ಥ ಬಹುಮಾನವನ್ನು ದಾಮೋದರ ಲೆಕ್ಕಿಸಿರಿಮಜಲು ಪಡೆದುಕೊಂಡರು. ಉಳಿದ ಸದಸ್ಯರಿಗೆ ಸಮಾದನಕರ ಬಹುಮಾನ ನೀಡಲಾಯಿತು.

ಸಂಘದಲ್ಲಿ ೫೫೦ ಸದಸ್ಯರಿದ್ದು, ೨೩೦ ಸಕ್ರಿಯ ಸದಸ್ಯರಿದ್ದಾರೆ. ವೇದಿಕೆಯಲ್ಲಿ ಉಪಾಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ ಸದಸ್ಯರಾದ ಎ.ಜೆ. ಬೋಸ್, ಈಶ್ವರ ಗೌಡ.ಜೆ, ಜಗದೀಶ ಶೆಟ್ಟಿ, ನಾರಾಯಣ ನಾಯ್ಕ, ಶ್ರೀಮತಿ ಮಹಾದೇವಿ. ಎಸ್.ಎನ್, ಶ್ರೀಮತಿ ಸುಂದರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಾಧವ ವೈ ವರದಿ ವಾಚಿಸಿ, ಅಯ-ವ್ಯಯ ಮಂಡಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿ, ಈಶ್ವರ ಜಾಲ್ತರ್ ಸ್ವಾಗತಿಸಿ, ಕುಶಾಲಪ್ಪ ನಾಯ್ಕ ದಡ್ಡು ಕಾರ್ಯಕ್ರಮ ನಿರೂಪಣೆ ಮಾಡಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.