ಮಗುವಿಗೆ ಜನ್ಮವಿತ್ತ ಅಪ್ರಾಪ್ತೆ – ಯುವಕನಿಗೆ ನ್ಯಾಯಾಂಗ ಬಂಧನ

Advt_Headding_Middle
Advt_Headding_Middle

17 ವರ್ಷದ ಯುವತಿಯನ್ನು ಪ್ರೀತಿಸಿ, ಆಕೆ ಬಸುರಿಯಾಗಿ ಮಗುವನ ತಾಯಿಯಾಗಲು ಕಾರಣನಾದ 21 ವರ್ಷದ ಯುವಕನಿಗೆ ಕಾನೂನಿನಂತೆ ಕೇಸು ಹಾಗೂ ನ್ಯಾಯಾಂಗ ಬಂಧನವಾದ ಘಟನೆ ಬಳ್ಪದಿಂದ ವರದಿಯಾಗಿದೆ.
ಬಳ್ಪ ಬೀದಿಗುಡ್ಡೆಯ ಹುಕ್ರ ಮುಗೇರ ಎಂಬವರ ಮಗ ದಿನೇಶ (೨೧) ತನ್ನ ಸಂಬಂಧಿಯಾದ ಕೊಂಬಾರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಅವರು ಮದುವೆಯಾಗಲು ನಿರ್ಧರಿಸಿದ್ದರು. ಇವರ ಪ್ರೇಮದ ಫಲವಾಗಿ ಯುವತಿ ಗರ್ಭವತಿಯಾಗಿ ತಿಂಗಳು ತುಂಬಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು. ಅಲ್ಲಿ ಸೆ. 20ರಂದು ಗಂಡು ಮಗುವಿಗೆ ಜನ್ಮನೀಡಿದಳು. 
ಮದುವೆಯಾಗದೆ ಮಗುವಾಗಿರುವುದು ಮತ್ತು ಆಕೆಗೆ ೧೮ ವರ್ಷ ತುಂಬದಿರುವ ವಿಚಾರ ತಿಳಿದ ಆಸ್ಪತ್ರೆಯವರು ಕಾನೂನಿನಂತೆ ಪೊಲೀಸ್ ಠಾಣೆಗೆ ಮಾಹಿತಿ ಒದಗಿಸಿದರು. ಪೊಲೀಸರು ಬಂದು ಹೇಳಿಕೆ ಪಡೆದು, ಅತ್ಯಾಚಾರ ಮತ್ತು ಪೋಸ್ಕೋ ಕಾಯ್ದೆ ಪ್ರಕಾರ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿ, ಬೀದಿಗುಡ್ಡೆಯ ದಿನೇಶ್‌ರನ್ನು ಬಂಧಿಸಿದರು. ತನಿಖಾಧಿಕಾರಿಯಾಗಿರುವ ಸರ್ಕಲ್ ಇನ್ಸ್‌ಪೆಕ್ಟರ್ ಸತೀಶ್‌ರವರು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.