HomePage_Banner
HomePage_Banner

ಐವರ್ನಾಡು ಗ್ರಾಮ ಪಂಚಾಯತ್ ಗೆ ಸತತ 2 ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ

2017-18 ನೇ ಸಾಲಿನಲ್ಲಿ ನಮ್ಮ ಗ್ರಾಮ ನಮ್ಮ ಯೋಜನೆ ಅತ್ಯುತ್ತಮವಾಗಿ ಅನುಷ್ಠಾನಿಸಿದ ದ.ಕ.ಜಿಲ್ಲೆಯ ಐವರ್ನಾಡು ಗ್ರಾಮ ಪಂಚಾಯತ್ ಸತತ2 ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಕ್ಕೆ ಆಯ್ಕೆಯಾಗಿದೆ.


ಸುಳ್ಯ ತಾಲೂಕಿನಿಂದ ಸುಬ್ರಹ್ಮಣ್ಯ, ಎಣ್ಮೂರು,ಐವರ್ನಾಡು ಗ್ರಾಮ ಪಂಚಾಯತ್ ಗಳು ಅರ್ಜಿ ಸಲ್ಲಿಸಿದ್ದು ಈ ಕುರಿತು ದ.ಕ.ಜಿಲ್ಲಾ ಪಂಚಾಯತ್ ನಿಂದ ಅಧಿಕಾರಿಗಳು ಪಂಚಾಯತಿಯನ್ನು ಭೇಟಿ ಮಾಡಿ ಪರಿಶೀಲಿಸಿದೆ. ಇದರ ಬಗ್ಗೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು ಐವರ್ನಾಡು ಗ್ರಾಮ ಪಂಚಾಯತು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಆಗಿದೆ.
ತೆರಿಗೆ ವಸೂಲಾತಿ,ಅನುದಾನ ಬಳಗೆ,ಖರ್ಚು, ಸಂಪನ್ಮೂಲ ಕ್ರೋಢೀಕರಣ,ಸಕಾಲ,ಶೌಚಾಲಯ ಮುಕ್ತ,ರಾಷ್ಟ್ತೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ,ಮಾನವದಿನ ಮತ್ತು ಆಸ್ತಿ ನಿರ್ಮಾಣ, ಮೂಲಭೂತ ಸೌಕರ್ಯ,ವಸತಿ ಯೋಜನೆಗಳ ಅನುಷ್ಠಾನ,ನೈರ್ಮಲ್ಯೀಕರಣ,ಪಂಚತಂತ್ರ ತಂತ್ರಾಂಶ ಹಾಗೂ ಇತರ ಯೋಜನೆಗಳ ಅನುಷ್ಠಾನ ಒಟ್ಟು 34 ಮಾನದಂಡಗಳನ್ನು ಪರಿಶೀಲಿಸಿ ಈ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ಪ್ರಧಾನ: ಅ.2 ರಂದು ಬೆಂಗಳೂರಿನ ವಿದಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಖ್ಯಮಂತ್ರಿಗಳು ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ ಮತ್ತು ಪಿ.ಡಿ.ಒ.ಯು.ಡಿ.ಶೇಖರ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್,ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಬೈರೇ ಗೌಡ ಹಾಗೂ ಇತರ ಗಣ್ಯರು ಉಪಸ್ಥಿತರಿರುವರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.