ಮೊರಂಗಲ್ಲು ಗುರುಪ್ರಸಾದ್ ರೈ ಅಧ್ಯಕ್ಷತೆಯ ಸಹಕಾರ ಸಂಘದ ಮಹಾಸಭೆ -ರೂ.೧೯೯.೮೪ ಕೋಟಿ ವಾರ್ಷಿಕ ವ್ಯವಹಾರ, ನಿವ್ವಳ ಲಾಭ.೨.೫೦ ಕೋಟಿ,

Advt_Headding_Middle
Advt_Headding_Middle

ಬೆಂಗಳೂರಿನ ಸಹಕಾರನಗರದಲ್ಲಿ ಆಲೆಟ್ಟಿ ಗ್ರಾಮದ ಮೊರಂಗಲ್ಲು ಗುರುಪ್ರಸಾದ್ ರೈಯವರ ಅಧ್ಯಕ್ಷತೆಯಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರನಗರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ.೨೩ ರಂದು ಬೆಂಗಳೂರಿನ ಕೇಂದ್ರ ಕಛೇರಿಯ ಸಭಾಭವನದಲ್ಲಿ ನಡೆಯಿತು.
೧೯೯೯ ರಲ್ಲಿ ಪ್ರಾರಂಭಗೊಂಡ ಸಂಸ್ಥೆಯು ೨೦೧೭-೧೮ ನೇ ಸಾಲಿನಲ್ಲಿ ವಾರ್ಷಿಕ ವ್ಯವಹಾರವು ೧೯೯.೮೪ ಕೋಟಿ ಯಾಗಿದ್ದು ನಿವ್ವಳ ಲಾಭಾಂಶ ೨.೫೦ ಕೋಟಿ ಹೊಂದಿದೆ. ಎ.ಶ್ರೇಣಿಯನ್ನು ಪಡೆದ ಸಂಸ್ಥೆಯಾಗಿದ್ದು ೬೪ ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ಗಳಿಸಿಕೊಂಡಿರುತ್ತದೆ. ಸಹಕಾರ ನಗರದಲ್ಲಿ ಕೇಂದ್ರ ಕಛೇರಿ ಇದ್ದು ಎರಡು ಶಾಖೆಗಳನ್ನು ಕಮ್ಮನಹಳ್ಳಿ ಮತ್ತು ಡಾ.ಶಿವರಾಮಕಾರಂತನಗರ ಹೊಂದಿರುತ್ತದೆ.೨ ಸ್ವಂತ ಕಟ್ಟಡಗಳನ್ನು ಹೊಂದಿದೆ. ೧೧ ಮಂದಿ ನಿರ್ದೇಶಕರನ್ನೊಳಗೊಂಡ ಈ ಸಂಘದ ಅಧ್ಯಕ್ಷರಾಗಿ ಗುರುಪ್ರಸಾದ್ ರೈ ಮೊರಂಗಲ್ಲು ರವರು ನಿರಂತರ ೧೯ ವರ್ಷಗಳಿಂದ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಇವರು ಮೊರಂಗಲ್ಲು ಮನೆತನದವರಾಗಿದ್ದು ಶ್ರೀ ಧೂಮಾವತಿ ದೈವಸ್ಥಾನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಊರಿನ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡುವ ಮೂಲಕ ಕೊಡುಗೈ ದಾನಿ ಎಂದೆನಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.