ಬಳ್ಪ ಹಾಲು ಉತ್ಪಾದಕರ ಸಂಘದ ಮಹಾಸಭೆ- ರೂ. ೨,೪೦,೦೦೦ ನಿವ್ವಳ ಲಾಭ

Advt_Headding_Middle
Advt_Headding_Middle

ಬಳ್ಪ ಹಾಲು ಸಹಕಾರ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್‌ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಸಂಘವು ಈಗಾಗಲೇ ತನ್ನ ಸ್ವಂತ ಖರ್ಚಿನಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿದ್ದು, ಕಟ್ಟಡ ರಕ್ಷಣೆಗಾಗಿ ಮೇಲ್ಛಾವಣಿ ರಚಿಸುವುದೆಂದು ತೀರ್ಮಾನಿಸಲಾಯಿತು. ವರ್ಷದ ಲಾಭಾಂಶದಲ್ಲಿ ರೂ. ೧೦,೦೦೦ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವುದಲ್ಲದೆ ಸದಸ್ಯರಿಗೆ ಶೇ. ೯ರಷ್ಟು ಡಿವಿಡೆಂಡ್ ಮತ್ತು ಹಾಲು ಹಾಕುವ ಸದಸ್ಯರಿಗೆ ಪ್ರತಿ ಲೀಟರ್‌ಗೆ ೬೫ ಪೈಸೆ ಬೋನಸ್ ವಿತರಿಸುವುದೆಂದು ನಿರ್ಣಯಿಸಲಾಯಿತು.
ದ.ಕ. ಹಾಳು ಒಕ್ಕೂಟದ ವಿಸ್ತರಣಾಧಿಕಾರಿ ಹರೀಶ್‌ಕುಮಾರ್ ಮಾತನಾಡಿ, ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಿ ಸಹಕರಿಸಬೇಕೆಂದರು. ಕಾರ್ಯದರ್ಶಿ ಶ್ರೀಮತಿ ಜಲಜಾಕ್ಷಿ ವರದಿ ಮತ್ತು ಲೆಕ್ಕಾಚಾರಗಳನ್ನು ಮಂಡಿಸಿದರು. ಸಂಘದ ನಿರ್ದೇಶಕರಾದ ಸುಬ್ರಹ್ಮಣ್ಯ ಕುಳ ಸ್ವಾಗತಿಸಿ, ನಿರ್ದೇಶಕ ಜಯರಾಮ ಆಲ್ಕಬೆ ವಂದಿಸಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ನಿಲೇಶ್ವರ ನಾಳ, ನಿರ್ದೇಶಕ ದೇವದಾಸ್ ರೈ, ಶ್ರೀಮತಿ ಹೇಮಲತಾ, ದಯಾನಂದ ಕಿನ್ನಿಕುಮ್ರಿ, ಚಂದಪ್ಪ ಮಣಿಯಾಣಿ, ಶ್ರೀಮತಿ ನಳಿನಿ, ಶ್ರೀಮತಿ ಮೀನಾಕ್ಷಿ, ಗಣೇಶ್ ಮೆದು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.