Breaking News

ಕೆ.ವಿ.ಜಿ.ಪಾಲಿಟೆಕ್ನಿಕ್ : ಎನ್ನೆಸ್ಸೆಸ್ಸೆಸ್ ದಿನಾಚರಣೆ

Advt_Headding_Middle
Advt_Headding_Middle

ಕುರುಂಜಿ ವೆಂಕಟ್ರಮಣಗೌಡ ಪಾಲಿಟೆಕ್ನಿಕ್‌ನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಎನ್ನೆಸ್ಸೆಸ್ ದಿನಾಚರಣೆ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಬಾಲಕೃಷ್ಣ ಬೊಳ್ಳೂರು ಮಾತನಾಡಿ ನಾವು ಸಮಾಜದಿಂದ ಪಡೆದುಕೊಂಡದ್ದನ್ನು ಮತ್ತೆ ಸಮಾಜಕ್ಕೆ ನೀಡಿ ಋಣ ಸಂದಾಯ ಮಾಡಲು ಎನ್ನೆಸ್ಸೆಸ್ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಮಾತನಾಡಿ ಶಿಕ್ಷಣವೆಂದರೆ ಕೇವಲ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಕೊಂಡಿಯಾಗಿರದೆ ಅದು ವಿದ್ಯಾರ್ಥಿ ಹಾಗೂ ಸಮುದಾಯದ ಮಧ್ಯೆ ಕೊಂಡಿಯಾಗಿರಬೇಕು ಎಂಬ ನಿಟ್ಟಿನಲ್ಲಿ ಎನ್ನೆಸ್ಸೆಸ್ ಅಸ್ತಿತ್ವ ಬಂದಿದೆ ಎಂದು ಹೇಳಿದರು.

ಘಟಕ ಎರಡರ ಕಾರ್ಯಕ್ರಮಾಧಿಕಾರಿ ಸುನಿಲ್‌ಕುಮಾರ್ ಮಾತನಾಡಿ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ, ಸಮಾಜಸೇವೆ, ಸಹಬಾಳ್ವೆ ಮುಂತಾದ ಗುಣಗಳನ್ನು ರೂಢಿಸಿಕೊಳ್ಳಲು ಎನ್ನೆಸ್ಸೆಸ್ ಸಹಕಾರಿ ಎಂದು ಹೇಳಿದರು. ವೇದಿಕೆಯಲ್ಲಿ ಘಟಕ ನಾಯಕರಾದ ಯಶ್ವಿತ್, ಜೀವನ್‌ರಾಜ್, ಅನ್ವಿತಾ ಮುಡೂರು ಹಾಗೂ ಭವ್ಯಶ್ರೀ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಸ್ವಯಂ ಸೇವಕರಾದ ರಿತೇಶ್ ಸ್ವಾಗತಿಸಿ ಕು. ಅನ್ವಿತಾ ಮುಡೂರು ವಂದಿಸಿದರು. ಹಕೀಂ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.