ಅ. 5: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಸುಳ್ಯದ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ.) ತಾಲೂಕು ಶಾಖೆ ಸುಳ್ಯದ ವಾರ್ಷಿಕ ಮಹಾಸಭೆ, ಮಾಹಿತಿ ಕಾರ್ಯಾಗಾರ ಮತ್ತು ಸನ್ಮಾನ ಸಮಾರಂಭವು ಅ. 5ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿದೆ.

1-3-2017 ರಿಂದ 31-3-2018 ರ ಅವಧಿಯಲ್ಲಿ ನಿವೃತ್ತರಾದ ನೌಕರರು ತಮ್ಮ ಮಾಹಿತಿಯನ್ನು ಇಲಾಖಾ ಮುಖ್ಯಸ್ಥರಲ್ಲಿ ಅ. ೪ರ ಮೊದಲು ನೀಡಬೇಕು. ನೌಕರರ ಹಾಗೂ ಮಕ್ಕಳ ಕ್ರೀಡಾಕೂಟದಲ್ಲಿ ವಿಜಯಿಯಾದವರಿಗೆ ಬಹುಮಾನ ವಿತರಣೆ ನಗದು ರೂಪದಲ್ಲಿ ನೀಡುವುದರಿಂದ ಖುದ್ದಾಗಿ ಸಮಾರಂಭಕ್ಕೆ ಹಾಜರಾಗಬೇಕು. ವಿಶೇಷ ಸಾಧನೆ ಮಾಡಿದ ನೌಕರರಿಗೆ ಮತ್ತು ನೌಕರರ ಮಕ್ಕಳಿಗೆ ಸನ್ಮಾನ ಮಾಡಲಾಗುವುದು. ಆರೋಗ್ಯ ಕರ್ನಾಟಕ ಎಂಬ ಮಾಹಿತಿ ಕಾರ್ಯಾಗಾರವು ಈ ಸಂದರ್ಭದಲ್ಲಿ ಜರಗಲಿರುವುದು. ಸದ್ರಿ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಸರಕಾರಿ ನೌಕರರು ಆಗಮಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಯು.ಡಿ.ಶೇಖರ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.